Advertisement

ಸೌಹಾರ್ದ ಜೀವನ ಸಾಗಿಸಲು ಸಲಹೆ

03:22 PM Jul 13, 2018 | |

ಲಿಂಗಸುಗೂರು: ಸಾಮಾಜಿಕ ಬಹಿಷ್ಕಾರದಂತಹ ಹೀನ ಕೆಲಸಕ್ಕೆ ಹೋಗದೇ ಒಂದೇ ಊರಿನಲ್ಲಿ ಸೌಹಾರ್ದದಿಂದ ಬದುಕು ಸಾಗಿಸಬೇಕೆಂದು ಸಹಾಯಕ ಆಯುಕ್ತ ಎಂ.ಪಿ.ಮಾರುತಿ ಹೇಳಿದರು.

Advertisement

ಪಟ್ಟಣದ ಸಹಾಯಕ ಆಯುಕ್ತರ ಕಚೇರಿಯಲ್ಲಿ ತಾಲೂಕಿನ ಯರಜಂತಿ ಗ್ರಾಮದಲ್ಲಿ ದಲಿತ ಕುಟಂಬಗಳಿಗೆ ಸಾಮಾಜಿಕ ಬಹಿಷ್ಕಾರ ವಿಷಯವಾಗಿ ನಡೆದ ಅಧಿಕಾರಿಗಳು, ದಲಿತರ ಹಾಗೂ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅಣ್ಣ-ತಮ್ಮ ಇದ್ದಂತೆ. ತಾರತಮ್ಯ ಮಾಡಬಾರದು. ಸಾಮಾಜಿಕ
ಬಹಿಷ್ಕಾರ ಹಾಕವುದು ಸರಿಯಲ್ಲ. ಇದು ಕಾನೂನಿಗೆ ವಿರುದ್ಧವಾಗಿದೆ. ಎರಡೂ ಕೋಮಿನವರಿಗೆ ಕರೆಸಿ ಸಂಧಾನ ಮಾಡಿಸಿ. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಗ್ರಾಮದ ಹಿರಿಯರಿಗೆ ಸಲಹೆ ನೀಡಿದರು.

ಯರಜಂತಿ ಗ್ರಾಮದಲ್ಲಿ ದಲಿತರಿಗೆ ಕುಡಿಯುವ ನೀರಿಗಾಗಿ 5 ಲಕ್ಷ ರೂ. ಅನುದಾನ ಒದಗಿಸಲಾಗುವುದು ಹಾಗೂ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪ್ರವೇಶಾತಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಹಾಗೂ ಸಿಡಿಪಿಒಗೆ ಸೂಚಿಸಿದರು. 

ಆಕ್ರೋಶ: ಯರಜಂತಿ ಗ್ರಾಮದಲ್ಲಿ ಬಹಿಷ್ಕಾರ ವಿಷಯವನ್ನು ಬಹಿರಂಗಪಡಿಸಿದ್ದು ಮಾಧ್ಯಮದವರು. ಅವರನ್ನು ದೂರವಿಟ್ಟು ಸಭೆ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಮುಖಂಡ ಮೋಹನ ಗೋಸ್ಲೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಡಿವೈಎಸ್‌ಪಿ ಎಸ್‌.ಎಚ್‌.ಸುಬೇದಾರ, ತಹಶೀಲ್ದಾರ್‌ ಚಾಮರಾಜ ಪಾಟೀಲ, ಸಿಪಿಐ ವಿ.ಎಸ್‌.ಹಿರೇಮಠ, ಬಿಇಒ ಚಂದ್ರಶೇಖರ ಬಂಡಾರಿ, ಸಿಡಿಪಿಒ ಪ್ರೇಮಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ರವಿ, ದಸಂಸ ಮುಖಂಡರಾದ ಹನುಮಂತ ವೆಂಕಟಾಪುರ, ಅಜ್ಜಪ್ಪ ಕರಡಕಲ್‌, ಶಿವಪ್ಪ ಯರಜಂತಿ, ನಾಗಪ್ಪ, ಹುಲಗಮ್ಮ, ಹನುಮಮ್ಮ, ಈರಮ್ಮ,
ಮಹಾದೇವಪ್ಪ ಪರಾಂಪುರ ಇತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next