Advertisement
ಶನಿವಾರ ಬೆಳಗ್ಗೆ ರಾಷ್ಟ್ರಮಟ್ಟದ ಓಪನ್ ಈಜು ಸ್ಪರ್ಧೆಯಲ್ಲಿ ಕೇರಳ, ಹರಿಯಾಣ, ತ.ನಾಡು, ಆಂಧ್ರ ಪ್ರದೇಶ, ಪುದುಚೇರಿ ಸಹಿತ ವಿವಿಧ ರಾಜ್ಯಗಳ 320 ಕ್ರೀಡಾಪಟುಗಳು ಭಾಗವಹಿಸಿದ್ದರು.
ಕಮಾಂಡೋ ಬ್ರಿಡ್ಜ್, ಸ್ಲೇಕ್‌ಲೈನ್, ಎಕ್ಸ್‌ಟ್ರೀಮ್ ನ್ಪೋರ್ಟ್ಸ್, ಬಿಎಂಎಕ್ಸ್, ಸ್ಕೇಟ್ ಬೋರ್ಡಿಂಗ್, ಜೆಟ್‌ಸ್ಕೈ, ವಿಂಡ್ ಸರ್ಫಿಂಗ್, ಬನಾನ ರೈಡ್, ಜಾಲಿ ರೈಡ್‌ಗಳು ನಡೆದರೆ, ಸೈಂಟ್ ಮೇರೀಸ್ ದ್ವೀಪದಲ್ಲಿ ಬೋಲ್ಡಿಂಗ್ ಸ್ಲೇಕ್‌ಲೈನ್, ಜುಮ್ಮರಿಂಗ್, ಬರ್ಮಾ ಬ್ರಿಡ್ಜ್ ರೈಡ್‌ಗಳು ನಡೆದವು. ಮಲ್ಪೆ ಬೀಚ್‌ನಲ್ಲಿ ಕಯಾಕಿಂಗ್ ಸ್ಪರ್ಧೆ ನಡೆಯಿತು. ಹಗ್ಗಜಗ್ಗಾಟ ಸ್ಪರ್ಧೆ ಯಲ್ಲಿ ಪುರುಷರ ವಿಭಾಗದಲ್ಲಿ 11 ತಂಡಗಳು, ಮಹಿಳೆಯರ ವಿಭಾಗದಲ್ಲಿ 6 ತಂಡಗಳು ಸ್ಪರ್ಧಿಸಿದ್ದವು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಹ್ಲಾದ ಆಚಾರ್ಯ ಅವರ ಶ್ಯಾಡೋ ಪ್ಲೇ ಮತ್ತು ಆಳ್ವಾಸ್ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಕಾರ್ಯಕ್ರಮದ ವೀಕ್ಷಣೆಗೆ ಭಾರೀ ಜನಸ್ತೋಮ ಸೇರಿದ್ದು, ಕಡಲ ಕಿನಾರೆಯಲ್ಲಿ ಸಂಭ್ರಮ ಮನೆಮಾಡಿದೆ.