Advertisement

Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!

10:37 AM Apr 17, 2024 | Team Udayavani |

ಬೆಂಗಳೂರು: ಸಹೋದರಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಕೊಲೆಗೆ ಸುಪಾರಿ ನೀಡಿದ್ದ ಯುವಕ ಹಾಗೂ ಸುಪಾರಿ ಪಡೆದು ಕೊಲೆಗೆ ಸಂಚು ರೂಪಿಸಿದ್ದ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿ ಆರು ಮಂದಿಯನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೋಲಾರದ ಮಾಲೂರಿನ ಹೇಮಂತ್‌ ರೆಡ್ಡಿ (20), ಗಗನ್‌(19) ಮತ್ತು ಬಾಲಾಜಿ(20) ಬಂಧಿತರು. ಇತರೆ ಮೂವರು ಅಪ್ರಾಪ್ತರನ್ನು ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಿ, ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಬಂಧಿತರಿಂದ ಒಂದು ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಹೇಮಂತ್‌ ರೆಡ್ಡಿ ಸುಪಾರಿ ನೀಡಿದ್ದು, ಇತರೆ ಆರೋಪಿಗಳು ಕಿಶೋರ್‌ ಎಂಬಾತನ ಹತ್ಯೆಗೆ ಸುಪಾರಿ ಪೆಡದುಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಏ.15ರಂದು ರಾತ್ರಿ 12 ಗಂಟೆಗೆ ಚಿಕ್ಕಜಾಲ ಠಾಣೆಯ ಪಿಎಸ್‌ಐ ಶಿವಣ್ಣ ಗಸ್ತಿನಲ್ಲಿದ್ದರು. ಆಗ ಗಂಟಿಗಾನಹಳ್ಳಿ ಬಳಿಯ ಜಿಸಿಬಿಸಿ ಅಪಾರ್ಟ್ ಮೆಂಟ್‌ ರಸ್ತೆ ಪಕ್ಕದ ಕತ್ತಲು ಪ್ರದೇಶದಲ್ಲಿ ಮಂಕಿ ಕ್ಯಾಪ್‌ ಧರಿಸಿದ ಐವರು ಅಪರಿಚಿತರು ಟಾಟಾ ಸುಮೋ ವಾಹನ ನಿಲ್ಲಿಸಿಕೊಂಡು ಕುಳಿತಿರುವುದು ಕಂಡು ಬಂದಿದೆ. ಈ ವೇಳೆ ಅವರನ್ನು ಸುತ್ತುವರಿದು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಾರೋಹಳ್ಳಿಯ ಸಾಯಿಗ್ರೀನ್‌ ಪಾರ್ಕ್‌ ಲೇಔಟ್‌ ನಿವಾಸಿ ಕಿಶೋರ್‌ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ. ‌

ಅಲ್ಲದೆ, ಅದಕ್ಕಾಗಿ ಹೇಮಂತ್‌ ರೆಡ್ಡಿ ಎಂಬಾತ ಸುಪಾರಿ ನೀಡಿದ್ದಾನೆ ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಏನಿದು ಪ್ರಕರಣ?: ಪ್ರಮುಖ ಆರೋಪಿ ಹೇಮಂತ್‌ ರೆಡ್ಡಿ ಸಹೋದರಿ ಮತ್ತು ಕಿಶೋರ್‌ ಒಂದೇ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ಹೇಮಂತ್‌ ರೆಡ್ಡಿಗೆ ಗೊತ್ತಾಗಿದೆ. ಹೀಗಾಗಿ ಕಿಶೋರ್‌ನ ಕೊಲೆ ಮಾಡಲು ನಿರ್ಧರಿಸಿದ್ದ ಹೇಮಂತ್‌ ರೆಡ್ಡಿ, ತನಗೆ ಪರಿಚಯವಿರುವ ಗಗನ್‌, ಬಾಲಾಜಿ ಹಾಗೂ ಇತರರನ್ನು ಭೇಟಿಯಾಗಿ ಕೊಲೆ ವಿಚಾರ ತಿಳಿಸಿದ್ದಾನೆ. ಅಲ್ಲದೆ, ಕಿಶೋರ್‌ ಹತ್ಯೆಗೆ 3 ಲಕ್ಷ ರೂ. ಸುಪಾರಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಸುಪಾರಿ ಪಡೆದ ಗಗನ್‌, ಬಾಲಜಿ ಮತ್ತು ಇತರರು ಏ.15ರಂದು ರಾತ್ರಿ 12 ಗಂಟೆಗೆ ಕಿಶೋರ್‌ ಗಂಟಿಗಾನಹಳ್ಳಿ ಮಾರ್ಗವಾಗಿ ಹಾರೋಹಳ್ಳಿಯ ಮನೆಗೆ ತೆರಳುವ ಬಗ್ಗೆ ಮಾಹಿತಿ ಪಡೆದುಕೊಂಡು, ಅದೇ ಮಾರ್ಗದಲ್ಲಿ ಮಾರಕಾಸ್ತ್ರಗಳೊಂದಿಗೆ ಕಿಶೋರ್‌ ಗಾಗಿ ಕಾಯುತ್ತಿದ್ದರು. ಅದೇ ವೇಳೆ ಗಸ್ತಿನಲ್ಲಿದ್ದ ಪಿಎಸ್‌ಐ ಶಿವಣ್ಣ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next