Advertisement

ಸಾರ್ವಜನಿಕರ ಸಂಪರ್ಕಕ್ಕೆ 24X7 ಲಭ್ಯವಿರಲಿದ್ದೇನೆ

11:09 AM Apr 02, 2021 | Team Udayavani |

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಆಗಿ ರಾಕೇಶ್‌ಸಿಂಗ್‌ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ನಗರದಲ್ಲಿ ಕೋವಿಡ್ ಸೋಂಕು ಉಲ್ಬಣ, ಜನಪ್ರತಿನಿಧಿಗಳು ಇಲ್ಲದ ಸಂದರ್ಭ ಹಾಗೂ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ಹೊಣೆಯೂ ರಾಕೇಶ್‌ ಸಿಂಗ್‌ ಅವರ ಮೇಲಿದೆ. ಈ ಸಂದರ್ಭದಲ್ಲಿ ಪಾಲಿಕೆಯ ಆಡಳಿತಾಧಿಕಾರಿ ಆಗಿ ಅವರ ಮುಂದಿರುವ ಸವಾಲುಗಳು ಏನು ಮತ್ತು ಅವರ ದೂರದೃಷ್ಟಿ ಯೋಜನೆ ಏನು ಎನ್ನುವ ಬಗ್ಗೆ “ಉದಯವಾಣಿ’ ಯೊಂದಿಗೆ ರಾಕೇಶ್‌ಸಿಂಗ್‌ ಮುಕ್ತವಾಗಿ ಮಾತನಾಡಿದ್ದಾರೆ

Advertisement

ಜನಪ್ರತಿನಿಧಿಗಳು ಇಲ್ಲದೆ ಇರುವುದರಿಂದ ಪಾಲಿಕೆ ಮತ್ತು ಜನ ಸಂಪರ್ಕ ಕುಸಿದಿದೆ, ನಿಟ್ಟಿ ನಲ್ಲಿ ನಿಮ್ಮ ಯೋಜನೆ ಏನು ?

ಸಾರ್ವಜನಿಕ ಸಂಪರ್ಕಕ್ಕೆ ಆದ್ಯತೆ ನೀಡಲಾಗುವುದು. 24/7 ನಾನು ಲಭ್ಯವಿರಲಿದ್ದೇನೆ. ತುರ್ತು ಸಭೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಸಂದರ್ಭದಲ್ಲಿ ಜನರಿಗೆ ನಾನು ಸಿಗಲಿದ್ದೇನೆ.

ಜನ ಸಂಪರ್ಕಕ್ಕೆ ವಿಶೇಷ ಯೋಜನೆ ನಿರೀಕ್ಷಿಸಬಹುದೇ?

ಜನ ಸಂಪರ್ಕಕ್ಕೆ ಆದ್ಯತೆ ನೀಡಲಾಗುವುದು. ಈ ಸಂಬಂಧ ವಿಶೇಷ ಯೋಜನೆ ರೂಪಿಸಿಕೊಳ್ಳುವ ನಿಟ್ಟಿ ನಲ್ಲಿ ಚರ್ಚೆ ಮಾಡಿ ಶೀಘ್ರ ಕ್ರಮವಹಿಸಲಾಗುವುದು.

Advertisement

ಕಠಿಣ ಪರಿಸ್ಥಿತಿಯಲ್ಲಿ ಆಡಳಿತಾಧಿಕಾರಿಯಾಗಿ ನಿಯೋಜನೆಗೊಂಡಿದ್ದೀರಿ ಸವಾಲಿನ ಬಗ್ಗೆ ?

ಯಾವುದೇ ಸಂಸ್ಥೆಯಾದರೂ ಒಬ್ಬ ವ್ಯಕ್ತಿ ಮೇಲೆ ಅವಲಂಬಿಸಿರುವುದಿಲ್ಲ. ಇಡೀ ತಂಡ ಮುಖ್ಯ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಟ್ಟಾಗಿ ಸಾಗುವ ಕೆಲಸ ಮಾಡುತ್ತೇನೆ.

ಆಡಳಿತಾಧಿಕಾರಿ ನಿರ್ಣಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಸಿಗುವುದೆ ?

ಪಾಲಿಕೆಯಿಂದ ಸರ್ಕಾರಕ್ಕೆ ಹೋಗುವ ಪ್ರಸ್ತಾವನೆ, ನಿರ್ಣಯ ಮತ್ತು ಎಲ್ಲಮಾಹಿತಿಯನ್ನು ಮಾಧ್ಯಮಗಳ ಮೂಲಕಮತ್ತು ಪಾಲಿಕೆ ವೆಬ್‌ಸೈಟ್‌ನ ಮೂಲಕ ಜನರಿಗೆ ತಲುಪಿಸಲಾಗುವುದು.

ಬಿಬಿಎಂಪಿಗೆ ಹೊಸ ಪ್ರದೇಶ ಸೇರ್ಪಡೆ ಬಗ್ಗೆ ?

ಸರ್ಕಾರ ರಸ್ತೆ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ನೀಡಿದೆ. ವಿವಿಧ ಆದಾಯ ಮೂಲ ಬಳಸಿಕೊಂಡು ಹೊಸ ಪ್ರದೇಶ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ನಗರದಲ್ಲಿ ಕೋವಿಡ್ ಸೋಂಕು ಉಲ್ಬಣಿಸಿದೆ. ಬಗ್ಗೆ ತುರ್ತು ಕ್ರಮ ಏನು ?

ನಗರದಲ್ಲಿ ಕೋವಿಡ್ ಸೋಂಕು ತಡೆಗೆ ಕೇಂದ್ರ ಸರ್ಕಾರದ ಐದು ಅಂಶಗಳಿಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರತಿದಿನ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು.

ಪಾಲಿಕೆಯ ಆರ್ಥಿಕ ನಿರ್ವಹಣೆ ಮತ್ತು ಭ್ರಷ್ಟಾಚಾರ ತಡೆಗೆ ಯೋಜನೆ ಏನು ?

ಪಾಲಿಕೆಯ ನಿರ್ವಹಣೆ ಬಗ್ಗೆ ಒಂದು ವಾರ ಪರಿಶೀಲಿಸಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

 ವಿಶೇಷ ಆಯುಕ್ತರನ್ನೇ ವಲಯ ಜಂಟಿ ಆಯುಕ್ತರಾನ್ನಾಗಿ ನಿಯೋಜಿಸಲಾಗಿದೆ ಇದರಿಂದ ಆಡಳಿತಾತ್ಮಕ ನಿರ್ವಹಣೆ ಮೇಲೆ ಪರಿಣಾಮ ಬೀರಲಿದೆಯೇ?

ಬಿಬಿಎಂಪಿ ಹೊಸ ಕಾಯ್ದೆಯ ಪ್ರಕಾರ ವಿಶೇಷ ಆಯುಕ್ತರು ವಲಯ ಜಂಟಿ ಆಯುಕ್ತ ರಾಗಿ ಕಾರ್ಯುನಿರ್ವಹಿಸಲಿದ್ದಾರೆ. ವಿಶೇಷ ಆಯುಕ್ತರ ಜವಾಬ್ದಾರಿ ಆಯುಕ್ತರ ಮಟ್ಟಕ್ಕೆ ಏರಿಕೆ ಆಗಿದೆ. ಹಾಲಿ ಜಂಟಿ ಆಯುಕ್ತರು ಇವರಿಗೆ ಆಡಳಿತಾತ್ಮಕ ನಿರ್ವಹಣೆಯಲ್ಲಿ ನೆರವು ನೀಡಲಿದ್ದಾರೆ.

 

ಹಿತೇಶ್ ವೈ

Advertisement

Udayavani is now on Telegram. Click here to join our channel and stay updated with the latest news.

Next