ಮುಂಡಗೊಡ: ಇಲ್ಲಿನ ಲೊಯೋಲಾ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಗ್ರಾಮ ಪಂಚಾಯತಿಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಿಗೆ ಹಾಗೂ ಜನವೇದಿಕೆ ನಾಯಕರಿಗೆಉತ್ತಮ ಆಡಳಿತ ವ್ಯವಸ್ಥೆ ಕುರಿತು ತರಬೇತಿ ನೀಡಲಾಯಿತು.
ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಜೆರಾಲ್ಡ್ ಡಿಸೊಜಾ ಪ್ರಾಸ್ತಾವಿಕ ಮಾತನಾಡಿ,ಹೊಸದಾಗಿ ಆಯ್ಕೆಯಾದ ಪ್ರತಿಯೊಬ್ಬ ಗ್ರಾಪಂ ಸದಸ್ಯರಿಗೆ ಹಾಗೂ ಗ್ರಾಮದ ಅಭಿವೃದ್ಧಿಯಲ್ಲಿತಮ್ಮನ್ನು ತೊಡಗಿಸಿಕೊಂಡ ಜನವೇದಿಕೆ ನಾಯಕರುಗಳಿಗೆ ಉತ್ತಮ ಆಡಳಿತವೆಂದರೇನು?ಇದನ್ನು ತಿಳಿಯುವುದು ಅತಿಮುಖ್ಯ. ಜನರಿಗೆಆಡಳಿತಾರೂಢ ಸರ್ಕಾರಗಳಿಂದ ಹಾಗೂ ಆಆಡಳಿತದ ಚುಕ್ಕಾಣಿ ಹಿಡಿದ ಜನಪ್ರತಿನಿಧಿಗಳಿಂದ ನಿರೀಕ್ಷಿಸುವುದು ತಮ್ಮ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಈತರಬೇತಿ ಮೂಲಕ ನೀವು ಉತ್ತಮ ಆಡಳಿತದ ವ್ಯವಸ್ಥೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದಅಧ್ಯಕ್ಷ ದಯಾನಂದ ನಾಯ್ಕ ಮಾತನಾಡಿ,ಉತ್ತಮ ಆಡಳಿತ ಎಂದರೆ ನಿರ್ಧಾರಗಳನ್ನುತೆಗೆದುಕೊಳ್ಳುವ ಮತ್ತು ಜಾರಿಗೊಳಿಸುವಪ್ರಕ್ರಿಯೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರಲ್ಲಿ ಮುಖ್ಯವಾದ ಪಾತ್ರ ವಹಿಸುವರು.ಇದಲ್ಲದೆ ಸ್ಥಳಿಯರು, ಕೃಷಿಕರು, ರೈತ ಸಂಘಗಳು,ಸಹಕಾರ ಸಂಘಗಳು, ಸರ್ಕಾರೇತರ ಸಂಸ್ಥೆಗಳುಮತ್ತು ಧಾರ್ಮಿಕ ನಾಯಕರ ಪಾತ್ರವು ಇರುತ್ತದೆ.ಇವೆಲ್ಲವುಗಳ ಜೊತೆಗೆ ಇತ್ತಿಚೇಗೆ ಮಾಧ್ಯಮಗಳಪಾತ್ರವು ಆಡಳಿತದ ಮೇಲೆ ಮುಖ್ಯವಾದ ಪ್ರಭಾವಬೀರುತ್ತದೆ. ಮಾಧ್ಯಮಗಳ ಕ್ರಿಯಾ ಚಟುವಟಿಕೆ ಜನರಿಗೆ ನ್ಯಾಯ ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಯೊಜನೆಗಳನ್ನು ಜಾರಿಗೊಳಿಸುವವಿಧಾನ ಮತ್ತು ದಕ್ಷತೆ ಕಾಲಮಿತಿಯೊಳಗೆ ಅನುಷ್ಠಾನ ಗೊಳಿಸುವ ವ್ಯವಸ್ಥೆಯು ಉತ್ತಮಆಡಳಿತಕ್ಕೆ ಮಾನದಂಡವಾಗುತ್ತದೆ ಜನಸ್ನೇಹಿವಾತಾವರಣ ಬಡವರ ಪರವಾದ ಕಾಳಜಿಯಾರಿಗೆ ಫಲ ಸಿಗಬೇಕೊ ಅವರಿಗೆ ಸಿಕ್ಕರೆ ಮಾತ್ರಸದ್ವಿನಿಯೋಗ. ಇದರಲ್ಲಿ ಜನಪ್ರತಿನಿಧಿಗಳಿಗೂ ಹಾಗೂ ಅಧಿಕಾರಿ ಇಬ್ಬರಿಗೂ ಪಾಲು ದೊರೆಯುವುದು ಎಂದರು.
ಹುನಗುಂದ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ರಾಮಣ್ಣ ವಿಟ್ಲಾಪುರ ತರಬೇತಿ ಕಾರ್ಯಾಗಾರ ಉದ್ಘಾಟನೆ ಮಾಡಿದರು. ಲಕ್ಷ್ಮಣ ರಾಮಚಂದ್ರ ಮುಳೆ ಸಂವಿಧಾನಪ್ರಸ್ತಾವನೆ ಮತ್ತು ನಿರೂಪಿಸಿದರು. ಮಲ್ಲಮ್ಮನೀರಲಗಿ ನಿರ್ವಹಿಸಿದರು. ಈ ತರಬೇತಿಯಲ್ಲಿತಾಲೂಕಿನ ಗ್ರಾಪಂ ಸದಸ್ಯರು, ಜನವೇದಿಕೆ ನಾಯಕರು ಭಾಗವಹಿಸಿದ್ದರು.