Advertisement
ನಾವು ನಮ್ಮ ಕರಾವಳಿ ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ನಮಗೆ ಹಿಂದಿನ ವಿಜಯನಗರ ಆಳ್ವಿಕೆಯ ಕಾಲದ ಅನೇಕ ಘಟನೆಗಳು ಎದ್ದು ಕಾಣು ತ್ತವೆ. ಆಡಳಿತದಲ್ಲಿ ಅತಿರೇಕಗಳು ಸಂಭವಿ ಸಿದಾಗ ಸರಕಾರ ಯಾವ ರೀತಿ ಪ್ರತಿಕ್ರಿ ಯಿಸಿದೆ ಎಂಬುದು ಅವುಗಳಿಂದ ತಿಳಿ ಯುತ್ತದೆ. ವಿಜಯನಗರ ಆಡಳಿತ ಕಾಲ ದಲ್ಲಿ ಕರಾವಳಿ ಪ್ರದೇಶ ಎರಡು ರಾಜ್ಯ ಗಳಾಗಿ (ಬಾರಕೂರು, ಮಂಗಳೂರು) ವಿಂಗಡಿಸಲ್ಪಟ್ಟಿತ್ತು. ರಾಜ್ಯಗಳಲ್ಲಿ ರಾಜ್ಯ ಪಾಲರು ಮುಖ್ಯಸ್ಥರಾಗಿದ್ದರು. ಅವರು ತಮ್ಮ ಆಡಳಿತ ಕಾಲದಲ್ಲಿ ಕೇಂದ್ರ ಸರ ಕಾರದ ಹಿತವನ್ನು ನಿರ್ಲಕ್ಷಿ ಸುವಂತಿರಲಿಲ್ಲ. ಅದರೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರವನ್ನು ಉಲ್ಲಂ ಸುವಂತಿರಲಿಲ್ಲ. ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಯಾಗದಂತೆ ನಡೆದುಕೊಳ್ಳಬೇಕಾಗಿತ್ತು. ಬಹಳ ಜಾಗರೂಕರಾಗಿರಬೇಕಾಗಿತ್ತು. ರಾಜ್ಯಪಾಲರುಗಳ ದಬ್ಟಾಳಿಕೆಗೆ ಜನರು ಒಳಗಾದಾಗ ರಾಜರು ಮಧ್ಯ ಪ್ರವೇಶಿಸಿ ನ್ಯಾಯದಾನ ಮಾಡಿದ ಹಲವಾರು ನಿದರ್ಶನಗಳು ಕರಾವಳಿಯ ಇತಿಹಾ ಸದಲ್ಲಿ ನಮಗೆ ದೊರೆಯುತ್ತವೆ. ತಮಗೆ ಅನ್ಯಾಯವಾದಾಗ ಜನ ಪ್ರತಿಭಟಿಸು ತ್ತಿದ್ದರು. ನ್ಯಾಯ ಸಿಗುತ್ತಿತ್ತು.
Related Articles
Advertisement
ಕ್ರಿ.ಶ. 1536ರಲ್ಲಿ ರಾಜ್ಯಪಾಲ ಕೊಂಡ ಪ್ಪ ಒಡೆಯ ಉಪ್ಪೂರು ಗ್ರಾಮದ ಮೇಲೆ ಸೈನ್ಯದೊಂದಿಗೆ ದಾಳಿ ಮಾಡಿದ. ಊರಿ ನವರ ಪ್ರತಿಭಟನೆ ಹಿಂಸಾರೂಪ ತಳೆ ಯಿತು. ಕೊನೆಗೆ ಕೊಂಡಪ್ಪ ಒಡೆಯ ಪರಿ ಹಾರ ನೀಡಬೇಕಾಯಿತು. ಅವನು ತನ್ನ ಹುದ್ದೆಯನ್ನು ಕಳೆದುಕೊಳ್ಳಬೇ ಕಾಯಿತು.
ಕ್ರಿ. ಶ. 1544 ರಲ್ಲಿ ಅಚ್ಚಪ್ಪ ಒಡೆಯ ಬಾರಕೂರಿನ ರಾಜ್ಯಪಾಲನಾಗಿದ್ದ. ಅವನು ಕೋಟೆಕೇರಿಯ ಸೆಟ್ಟಿಕಾರ ಬೆಮ್ಮ ಬಾಲೆ ಸೆಟ್ಟಿಯ ಮಗಳ ಮೇಲೆ ಅತ್ಯಾ ಚಾರವೆಸಗಿದ. ಆಗ ಹತ್ತುಕೇರಿಯವರು ಪ್ರತಿಭಟಿಸಿದರು. ಆಗ ಅಚ್ಚಪ್ಪ ಒಡೆಯ ತನ್ನ ತಪ್ಪಿಗಾಗಿ ಬೆಮ್ಮ ಬಾಲೆ ಸೆಟ್ಟಿ ವಂಶ ಪಾರಂಪರ್ಯವಾಗಿ ಉಪ್ಪಿಲಾಡಿಯಲ್ಲಿ ಅರಮನೆಯ ಭೂಮಿಯಲ್ಲಿನ ಆದಾಯ ಅನುಭವಿಸಿ ಬರುವಂತೆ ಪರಿಹಾರವನ್ನು ನೀಡಿದ. ಇವು ಕೆಲವೊಂದು ಉದಾಹರ ಣೆಗಳು ಮಾತ್ರ. ಇಂತಹ ನಿದರ್ಶನಗಳು ನಮ್ಮ ಕರಾವಳಿಯ ಇತಿಹಾಸದಲ್ಲಿ ಸಾಕಷ್ಟಿವೆ.
ಅಧಿಕಾರದಲ್ಲಿದ್ದವರು ಜಾಗರೂಕತೆ ಯಿಂದ ಕಾರ್ಯನಿರ್ವಹಿಸಬೇಕು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅವರು ಅಧಿಕಾರದ ದರ್ಪದಿಂದ ಎಲ್ಲೆ ಮೀರಿ ವರ್ತಿಸಿದ್ದರು. ಅದನ್ನು ಜನ ಪ್ರತಿಭಟಿಸುತ್ತಿದ್ದರು. ಅವರ ಪ್ರತಿಭಟನೆ ವಿಫಲವಾದಾಗ ಅವರು ಹೂಡುತ್ತಿದ್ದ ಇನ್ನೊಂದು ಅಸ್ತ ಊರು ಬಿಟ್ಟು ಹೋಗುವುದು. ಆಗ ಸರಕಾರ ಕೆಟ್ಟ ಹೆಸರು ಬರಬಹುದು ಎಂಬ ಕಾರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತಿತ್ತು. ಹೀಗೆ ಜನರು ಹಲವು ಸಂದರ್ಭಗಳಲ್ಲಿ ತಮಗೆ ನ್ಯಾಯ ದೊರಕಿಸಿಕೊಂಡಿದ್ದರು.
ಆಗಿನ ರಾಜರ ಆಡಳಿತ ಕಾಲದಲ್ಲೂ ಜನ ದಬ್ಟಾಳಿಕೆಯನ್ನು ಸಹಿಸಿಕೊಳ್ಳುತ್ತಿರ ಲಿಲ್ಲ. ಸ್ಥಳೀಯ ಸಂಸ್ಥೆಗಳು ಜನರ ಬೆಂಬ ಲಕ್ಕೆ ನಿಲ್ಲುತ್ತಿದ್ದವು. ಸಂಸ್ಥೆಗಳ ಅಥವಾ ಜನರ ಪ್ರತಿನಿಧಿಗಳ ಅಧಿಕಾರವನ್ನು ಸರ ಕಾರ ಮೊಟಕುಗೊಳಿಸುವಂತಿರಲಿಲ್ಲ. ಆದರೆ ಈಗ ಜನ ಪ್ರತಿಭಟನೆ ಆರಂಭಿ ಸಿದರೆ ಅದನ್ನು ಹೇಗಾದರೂ ಮಾಡಿ ನಿಲ್ಲಿಸುವುದಕ್ಕೆ ಸರಕಾರವೇ ಪ್ರತಿತಂತ್ರ ಹೂಡುವುದನ್ನು ಕಾಣುತ್ತೇವೆ. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶ ವೆದರೆ ಕರಾವಳಿಯ ಪ್ರದೇಶದಿಂದ ರಾಜ ಧಾನಿ ಹಂಪೆ ಅಷ್ಟು ದೂರದಲ್ಲಿದ್ದರೂ ಇಲ್ಲಿನ ಜನರ ಕಷ್ಟ ಸುಖಗಳಿಗೆ ಸರಕಾರ ತತ್‌ಕ್ಷಣ ಸ್ಪಂದಿಸುತ್ತಿತ್ತು ಎಂಬುದು. ಅದು ಯಾವುದೇ ಆಧುನಿಕ ಸಂಪರ್ಕ ಸಾಧನಗಳಿಲ್ಲದ ಕಾಲ. ಅದು ಮಾತ್ರವಲ್ಲ ಆಗಿನ ಸರಕಾರ ಜನರಿಗೆ ಬೇಕಾದ ಅನು ಕೂಲತೆಗಳನ್ನು ಅಗತ್ಯವಾಗಿ ಒದಗಿಸುತ್ತಿ ತ್ತು. ಇದಕ್ಕೆ ಉತ್ತಮ ಉದಾಹರಣೆ ಯೆಂದರೆ ಆಳುಪ ರಾಣಿ ಚಿಕ್ಕಾ ಯಿತಾಯಿ ಸುಮಾರು 650 ವರ್ಷಗಳ ಹಿಂದೆ ಬಾರಕೂರು ಬೆಣ್ಣೆಕುದ್ರು ಮಧ್ಯೆ ಹೊಳೆಗೆ ನಿರ್ಮಿಸಿದ ಮರದ ಸೇತುವೆ ಹಾಗೂ ಅದರ ನಿರ್ವಹಣೆಗೆ ಮಾಡಿದ ವ್ಯವಸ್ಥೆ.
ಡಾ| ಬಿ. ಜಗದೀಶ ಶೆಟ್ಟಿ, ಬ್ರಹ್ಮಾವರ