Advertisement

ಅಡ್ಕದ ಕಟ್ಟೆ; ಮಾ.25ಸಂಜೆ ಹೊರೆಕಾಣಿಕೆ, ಮಾ.26 ಶ್ರೀ ಪಂಚ ಧೂಮಾವತಿ ದೈವಸ್ಥಾನದ ನೇಮೋತ್ಸವ

12:07 PM Mar 24, 2022 | Team Udayavani |

ಉಡುಪಿ:ಅಡ್ಕದ ಕಟ್ಟೆ ಶ್ರೀ ಪಂಚ ಧೂಮಾವತಿ ದೈವಸ್ಥಾನ ನಿಟ್ಟೂರು,ಕೊಡಂಕೂರು ಇದರ ಮಾ.26ರಂದು ನಡೆಯುವ ಕಾಲಾವಧಿ ನೇಮೋತ್ಸವದ ಪ್ರಯುಕ್ತ ಮಾ.25ಸಂಜೆ ಹೊರೆಕಾಣಿಕೆ ಮೆರವಣಿಗೆಯು ಉಡುಪಿ ,ಕಲ್ಸಂಕ ,ಗುಂಡಿಬೈಲ್‌ ಮತ್ತು ಕೊಡಂಕೂರು ,ಹನುಮಂತ ನಗರ ,ನಿಟ್ಟೂರು ಮೂಲಕ ದೈವಸ್ಥಾನಕ್ಕೆ ತಲುಪಲಿದೆ.

Advertisement

ರಾತ್ರಿ 8.30ಗಂಟೆಗೆ ಚಪ್ಪರ ಸ್ಥಾನ ಶುದ್ಧಿ ನಡೆಯಲಿದೆ.ಮಾ.26ರಂದು ಬೆಳಗ್ಗೆ 9.57ಕ್ಕೆ ನಿಟ್ಟೂರು ಶ್ರೀ ಧೂಮಾವತಿ ದೈವಸ್ಥಾನದಿಂದ ಭಂಡಾರ ಹೊರಟು ಶ್ರೀ ಸೋಮನಾಥೇಶ್ವರ ಮತ್ತು ಶ್ರೀ ವಿಷ್ಣುಮೂರ್ತಿ ದೇವರ ಭೇಟಿಯಾಗಲಿದೆ. ಪಂಚ ಧೂಮಾವತಿಯ ಚಪ್ಪರ ಪ್ರವೇಶವದ ಬಳಿಕ ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 9.34ಕ್ಕೆ ಶ್ರೀ ದೈವದ ನೇಮೋತ್ಸವ ಜರಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಣ್ಣಪ್ಪ ಸನಿಲ್‌ ತಿಳಿಸಿದ್ದಾರೆ.

ಕಾರಣಿಕದ ದೈವಸ್ಥಾನ

ಬಹಳ ಕಾರಣಿಕದ ದೈವಸ್ಥಾನ ಇದಾಗಿದ್ದು ದೇಶ ವಿದೇಶದಲ್ಲೂ ಇದಕ್ಕೆ ಬಹಳಷ್ಟು ಭಕ್ತರು ಇದ್ದಾರೆ. ಇಲ್ಲಿ ಬಂದು ಪ್ರಾರ್ಥನೆ ಮಾಡಿದರೆ ತಮ್ಮ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥವನ್ನು ನೆರವೇರಿಸಿ ಕೊಟ್ಟ ತುಂಬಾ ಉದಾಹರಣೆಗಳು ಇದೆ. ವಾರ್ಷಿಕ ನೇಮೋತ್ಸವದ ಮೊದಲು 7ದಿನಗಳ ಕಾಲ ಸ್ಥಳೀಯರಿಂದ ಸೌಹಾರ್ದ ಕೋಳಿ ಅಂಕ ನಡೆಯವುದು. ಆ ಸ್ಥಳದಲ್ಲಿ ರಕ್ತಹಾರವಾಗಬೇಕು ಎಂಬ ಪದ್ದತಿ ಹಿಂದಿನಿಂದಲೂ ನಡೆದು ಬರುತ್ತಿದೆ. ನೇಮದ ಸಂದರ್ಭದಲ್ಲಿ ಸುಮಾರು 8 ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸುವುದು ಇಲ್ಲಿನ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next