Advertisement

ಅಪ್ಪ ಹಾಕಿದ ಮರದ ಮೇಲೆ ಮನೆ ಕಟ್ಟಿದ ಆದಿವಾಸಿ ಗೆಜ್ಜ

08:50 AM Aug 02, 2017 | Harsha Rao |

ಪಿರಿಯಾಪಟ್ಟಣ: “ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬಿದ್ದ’ ಎಂಬುದು ಎಲ್ಲರೂ ಕೇಳಿರುವ ಬಹು ಪ್ರಸಿದಟಛಿ ಗಾದೆ. ಆದರೆ ಇಲ್ಲೊಬ್ಬ ಅಜ್ಜನಿಗೆ ಮಾತ್ರ ಅಪ್ಪ ಹಾಕಿದ ಮರವೇ ಸೂರಾಗಿದ್ದು ಮಾತ್ರ ವಿಪರ್ಯಾಸ! ಹೌದು, ನಾಗರಹೊಳೆ ಅಭಯಾರಣ್ಯದಲ್ಲಿರುವ ಮಲಗನಕೆರೆ ಹಾಡಿಯ ಜೇನುಕುರುಬ ಆದಿವಾಸಿ ಗೆಜ್ಜನೇ ಇದಕ್ಕೆ ಸಾಕ್ಷಿ.

Advertisement

ಸರ್ಕಾರಗಳು ಅರಣ್ಯ ಹಕ್ಕು ಕಾಯ್ದೆ ಮಾಡಿ ಆದಿವಾಸಿಗಳ ಒಕ್ಕಲೆಬ್ಬಿಸದೇ ಅಲ್ಲೇ ಮೂಲಸೌಲಭ್ಯ ಒದಗಿಸಬೇಕು ಎಂಬ ನಿಯಮ ಮಾಡಿದ್ದರೆ, ಅರಣ್ಯ ಅಧಿಕಾರಿಗಳು ಮಾತ್ರ ಗೆಜ್ಜ ನೆಲೆ ಮಾಡಿಕೊಳ್ಳಲೂ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಈ ಅಜ್ಜ ಮರದ ಮೇಲೆಯೇ ಮನೆ ಮಾಡಿಕೊಂಡು ಎರಡು ದಶಕಗಳಿಂದ ವಾಸಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲಗನಕೆರೆ ಹಾಡಿಯು ನಾಗರಹೊಳೆ ಅಭಯಾರಣ್ಯದಲ್ಲಿರುವ ಸುಮಾರು 24 ಆದಿವಾಸಿ ಕುಟುಂಬಗಳು ವಾಸವಿರುವ ಹಾಡಿ. ಇದರಲ್ಲಿ 23 ಸೋಲಿಗ ಕುಟುಂಬಗಳಿದ್ದರೆ, ಉಳಿದ ಒಂದು ಕುಟುಂಬ ಮುತ್ತಯ್ಯನ ಮಗ ಗೆಜ್ಜ ಅವರು ಜೇನುಕುರುಬ ಸಮುದಾಯದ್ದು. ಈ ಗೆಜ್ಜನಿಗೆ ಸರ್ಕಾರದಿಂದ ಮಂಜೂರಾದ ಅರ್ಧ ಎಕರೆ ಭೂಮಿ ಇದ್ದರೂ ಇವರು ಮಾತ್ರ ವಾಸವಿರುವುದು ಮಾವಿನ ಮರದ ಮೇಲೆ.

ನಾಲ್ಕೈದು ತಲೆಮಾರುಗಳಿಂದ ಮಲಗ ನಕೆರೆ ಹಾಡಿಯಲ್ಲಿಯೇ ವಾಸಿಸುತ್ತಿರುವ ಗೆಜ್ಜ ಅವರ ಕುಟುಂಬ ಒಂದು ಗುಡಿಸಲು ಹಾಕಿಕೊಂಡಿತ್ತು. ಈ ಗುಡಿಸಲಿನಲ್ಲಿ ಗೆಜ್ಜ ಅವರ ತಂದೆ ಮುತ್ತಯ್ಯ, ತಾಯಿ ಜೊತೆ ಸಹೋದರರಾದ ರಘು, ಪುಟ್ಟ, ಶಿವಪ್ಪನವರ ಜೊತೆ ಇದ್ದರು. ತಂದೆ ತಾಯಿ ಮೃತಪಟ್ಟ ನಂತರ ಸಹೋದರರು ಮದುವೆಯಾಗಿ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದರು. ಬಳಿಕ ಸರ್ಕಾರ ಇವರಿಗೆ ಅರ್ಧ ಎಕರೆ ಭೂಮಿಯನ್ನು ಮಂಜೂರು ಮಾಡಿಕೊಟ್ಟಿತು.

ಈ ಜಾಗದಲ್ಲಿ ಎಲ್ಲರೂ ಸೇರಿ ಮನೆ ನಿರ್ಮಿಸಿಕೊಳ್ಳಲು ಹೋದಾಗ ಅರಣ್ಯ ಅಧಿಕಾರಿಗಳು ಅಡ್ಡಿಪಡಿಸಿ ಇದ್ದ ಗುಡಿಸಲನ್ನೂ ತೆರವುಗೊಳಿಸಿದರು. ಸರ್ಕಾರ ಭೂಮಿ ಕೊಟ್ಟರೂ ಅಧಿಕಾರಿಗಳು ಮಾತ್ರ ಆ ಜಾಗದಲ್ಲಿ ಮನೆ ನಿರ್ಮಾಣ
ಮಾಡಲಾಗಲಿ, ಬೆಳೆ ಬೆಳೆಯುವುದಾಗಲಿ ಏನನ್ನೂ ಮಾಡಬಾರದು ಎಂದು ಹೇಳಿದ್ದಾರೆ. ಇವರು ನೆಲೆಸಿದ್ದ ಜಾಗವನ್ನು ಸಂಪೂರ್ಣವಾಗಿ ಆವರಿಸಿ ಕಂದಕ ಮತ್ತು ಸೋಲಾರ್‌ ಬೇಲಿಗಳನ್ನು ನಿರ್ಮಿಸಿದ್ದು, ಕನಿಷ್ಠ ಓಡಾಡಲೂ ಕಾಲು ರಸ್ತೆಯೂ ಇಲ್ಲದಂತೆ ಮಾಡಿದ್ದಾರೆ. ಸರ್ಕಾರ ಹಾಕಿದ್ದ ಕಿರು ನೀರು ಸರಬರಾಜು ಸೌಲಭ್ಯವನ್ನೂ ಬಳಸಿಕೊಳ್ಳದಂತೆ ಮಾಡಿದ್ದಾರೆ.
ನೆಲೆ ಕಳೆದುಕೊಂಡ ಕುಟುಂಬ ನಂತರ ದಿಕ್ಕಾಪಾಲಾಗಿದೆ.

Advertisement

ಗೆಜ್ಜರವರ ಪತ್ನಿ ಶೋಭಾ ರಾಣಿಗೇಟ್‌ ಬಳಿ ಇನ್ನೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡರೆ, ಗೆಜ್ಜ ಅವರ ಮಕ್ಕಳಲ್ಲಿ ಕುಳ್ಳ ಮದುವೆಯಾಗಿ ಹೆಂಡತಿ ಜೊತೆ ಬೇರೆ ಊರಿನಲ್ಲಿ ವಾಸವಿದ್ದರೆ, ಇನ್ನೊರ್ವ ಅಪ್ಪಿ ಅಬ್ಬಳತಿ ಗಿರಿಜನ ಶಾಲೆಯಲ್ಲಿ ಓದುತ್ತಿದ್ದಾನೆ. ಸಹೋದರರೆಲ್ಲಾ ತಮ್ಮ ಕುಟುಂಬದವರೊಡನೆ ಬೇರೆ ಊರುಗಳಿಗೆ ಕೂಲಿ ಅರಸಿಕೊಂಡು ಹೋಗಿದ್ದಾರೆ. ಗೆಜ್ಜ ಮಾತ್ರ ಹುಟ್ಟಿ ಬೆಳೆದ ಜಾಗವನ್ನು ಬಿಡಲಾರದೆ ಅಲ್ಲಿಯೇ ಇದ್ದ ಮಾವಿನ ಮರದ ಮೇಲೆ ಬಿದಿರಿನಿಂದ ಅಟ್ಟಣಿಗೆ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next