Advertisement
ಆತನನ್ನು ಗುರುವಾರ ಬೆಂಗಳೂರಿಗೆ ಕರೆ ದೊಯ್ಯಲು ಸಿದ್ಧತೆ ನಡೆಸಿದ್ದರೂ ಕಾರಣಾಂತರ ಗಳಿಂದ ಎಲ್ಲಿಗೂ ಕರೆದೊಯ್ದಿಲ್ಲ. ಪಣಂಬೂರಿನ ಎಸಿಪಿ ಕಚೇರಿಯಲ್ಲಿಯೇ ತನಿಖೆಯನ್ನು ಮುಂದುವರಿಸಲಾಗಿದೆ.ಆತನನ್ನು ಧ್ವನಿ ಪರೀಕ್ಷೆಗೆ ಒಳ ಪಡಿಸಬೇಕಾಗಿದ್ದು, ಅದಕ್ಕೆ ಬೇಕಾಗಿರುವ ಸೌಲಭ್ಯಗಳು ಮಂಗಳೂರಿ ನಲ್ಲಿಯೇ ಸ್ಥಳೀಯವಾಗಿ ಲಭ್ಯ ಇರುವುದರಿಂದ ಅದಕ್ಕಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಕಡಿಮೆ. ಇಲ್ಲಿಯೇ ಅದನ್ನು ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆತ ಬೆದರಿಕೆ ಕರೆ ಮಾಡಿದ ಬಗ್ಗೆ ಧ್ವನಿ ಪರೀಕ್ಷೆಯನ್ನು ಗುರುವಾರ ಇಲ್ಲಿಯೇ ನಡೆಸಲಾಗಿದೆ. ಅಗತ್ಯವಿದ್ದರೆ ಮಾತ್ರ ಜ.31ರಂದು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.