ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ ಸೆಪ್ಟೆಂಬರ್ 2ರಂದು ಇಸ್ರೋ ಉಡಾವಣೆ ಮಾಡಿದ್ದ ಆದಿತ್ಯ ಎಲ್-1 ಉಪಗ್ರಹ ಶನಿವಾರ ಯಶಸ್ವಿಯಾಗಿ ಕಕ್ಷೆಯನ್ನು ಸೇರುವ ಮೂಲಕ 4 ತಿಂಗಳು, 15 ಲಕ್ಷ ಕಿಲೋ ಮೀಟರ್ ದೂರದ ಸುದೀರ್ಘ ಪ್ರಯಾಣದ ಗಮ್ಯ ಸ್ಥಾನ ತಲುಪಿದಂತಾಗಿದೆ.
ಇದನ್ನೂ ಓದಿ:ದೆಹಲಿ ಗ್ಯಾಂಗ್ ಸ್ಟರ್ ಗೆಳತಿಗೆ 100 ಕೋಟಿ ಮೊತ್ತದ ಬಂಗಲೆ ಉಡುಗೊರೆ; ಪೊಲೀಸರಿಂದ ಜಪ್ತಿ
ಆದಿತ್ಯ ಉಪಗ್ರಹ ಲಾಗ್ರೇಂಜ್-1 ಬಿಂದುವಿಗೆ ತಲುಪಿದ್ದು, ಇದು ಇಸ್ರೋ ವಿಜ್ಞಾನಿಗಳಿಗೆ ಸಿಕ್ಕ ಬಹು ದೊಡ್ಡ ಯಶಸ್ಸಾಗಿದೆ. ಎಲ್-1 ಪಾಯಿಂಟ್ ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದಲ್ಲಿದೆ. ಈ ಬಿಂದುವಿನಿಂದ ಗ್ರಹಣ ಮತ್ತಿತರ ಯಾವುದೇ ಅಡೆತಡೆಗಳಿಲ್ಲದೇ ಸೌರ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಸುಲಭವಾಗಲಿದೆ.
ಪ್ರಧಾನಿ ಮೋದಿ ಅಭಿನಂದನೆ:
ಆದಿತ್ಯ ಎಲ್ 1 ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಇಸ್ರೋ ವಿಜ್ಞಾನಿಗಳು ಮತ್ತೊಂದು ಮೈಲಿಗಲ್ಲನ್ನು ನೆಟ್ಟಿದ್ದಾರೆ. ಚಂದ್ರಯಾನ3ರ ಬಳಿಕ ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಇದಕ್ಕಾಗಿ ನಾನು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.