Advertisement

Adithya L1: ಸೂರ್ಯನ ಕ್ಲಿಕ್ಕಿಸಿದ ಆದಿತ್ಯ ನೌಕೆ

09:08 PM Dec 08, 2023 | Pranav MS |

ನವದೆಹಲಿ: ಭಾನುವಿನ ಅಧ್ಯಯನಕ್ಕೆಂದು ತೆರಳಿರುವ ಇಸ್ರೋದ ಆದಿತ್ಯ-ಎಲ್‌1 ಬಾಹ್ಯಾಕಾಶ ನೌಕೆಯಲ್ಲಿರುವ ಸೋಲಾರ್‌ ಅಲ್ಟ್ರಾವಯಲೆಟ್‌ ಇಮೇಜಿಂಗ್‌ ಟೆಲಿಸ್ಕೋಪ್‌(ಎಸ್‌ಯುಐಟಿ) ಇದೇ ಮೊದಲ ಬಾರಿಗೆ ಸೂರ್ಯನ ಪೂರ್ಣಪ್ರಮಾಣದ ದುಂಡನೆಯ ಫೋಟೋವನ್ನು ಸೆರೆಹಿಡಿದಿದೆ.

Advertisement

ಸೌರ ವೀಕ್ಷಣೆ ಮತ್ತು ಅಧ್ಯಯನದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದ್ದು, ಈ ಚಿತ್ರದಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳ ಮಾತ್ರವಲ್ಲದೇ, ಅದರ ಮೇಲ್ಭಾಗದಲ್ಲಿರುವ ಪಾರದರ್ಶಕ ಪದರವೂ ಗೋಚರಿಸಿದೆ. ಈ ಪದರಗ ಸೌರಕಲೆಗಳು, ಜ್ವಾಲೆಗಳು ಸೇರಿದಂತೆ ಸೂರ್ಯನ ಹಲವು ವಿದ್ಯಮಾನಗಳನ್ನು ಅರ್ಥೈಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next