ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ.ವಿವೇಕ ರೈ ಹೇಳಿದರು.ಬಿ.ಸಿ. ರೋಡ್‌ನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
Advertisement
ಅಡಿಗರ ಬರಹ ಧ್ಯಾನಸ್ಥ ಮನಸ್ಸಿನಿಂದ ಮತ್ತು ಚಿಕಿತ್ಸಕ ಪ್ರಜ್ಞೆಯಿಂದ ಮೂಡಿದೆ. ಓದಿನಲ್ಲೂ ಹೊಸತನದ ಸಾಧ್ಯತೆಯನ್ನು ನೀಡಬಲ್ಲ ಸಾಮರ್ಥಯವಿದೆ. ಅವರ ಸಾಹಿತ್ಯವನ್ನು ಅಧ್ಯಯನಶೀಲರಾಗಿ ಓದುವುದೇ ಹೊಸ ತಲೆಮಾರು ನೀಡುವ ಗೌರವವಾಗುತ್ತದೆ ಎಂದು ಅವರು ಹೇಳಿದರು.
ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿಚಾರಗೋಷ್ಠಿಗಳಲ್ಲಿ ಎಸ್.ಆರ್. ವಿಜಯಶಂಕರ್ ಅಡಿಗರ ಕಾವ್ಯದ ಕುರಿತು ಹಾಗೂ ಡಾ| ವರದರಾಜ ಚಂದ್ರಗಿರಿ
ಅವರು ‘ಅಡಿಗರು ಮತ್ತು ಪ್ರಕೃತ ನಮ್ಮ ಸಾಹಿತ್ಯ ಧರ್ಮ’ ಕುರಿತು ವಿಚಾರ ಮಂಡಿಸಿದರು.
Related Articles
ರಾವ್ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಿದರು. ಸಮಿತಿಯ ಉಪಾಧ್ಯಕ್ಷ ವಿಶ್ವನಾಥ ಬಂಟ್ವಾಳ ಕಲಾವಿದರನ್ನು
ಗೌರವಿಸಿದರು.
Advertisement
ಈ ಸಂದರ್ಭ ಸಮಿತಿಯ ಕೋಶಾಧಿಕಾರಿ ಬಿ.ತಮ್ಮಯ್ಯ, ಕಾರ್ಯದರ್ಶಿ ಡಾ| ಅಜಕ್ಕಳ ಗಿರೀಶ ಭಟ್ಟ ಮತ್ತಿತರರುಉಪಸ್ಥಿತರಿದ್ದರು.ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸ್ವಾಗತಿಸಿ, ರೇಷ್ಮಾ ಜಿ. ಭಟ್ ವಂದಿಸಿದರು. ಡಾ| ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಅಭಿರುಚಿ ಜೋಡುಮಾರ್ಗ, ನಮ್ಮ ಬಂಟ್ವಾಳ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಬಂಟ್ವಾಳ ತಾಲೂಕು ಕನ್ನಡ
ಸಾಹಿತ್ಯ ಪರಿಷತ್ತು ಸಂಘಟನೆಯವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಸರಿಯಾದ ಕ್ರಮವಲ್ಲ
ಯಾವುದೇ ಸಾಹಿತ್ಯದ ಬಿಡಿ ಸಾಲನ್ನು ಗಮನಿಸಿ ಕವಿಯನ್ನು ಅಥವಾ ಆತನ ಕೃತಿಯನ್ನು ತೀರ್ಮಾನಿಸುವುದು ಸರಿಯಾದ ಕ್ರಮವಲ್ಲ. ಅಡಿಗರ ಒಟ್ಟು ಕಾವ್ಯ ಸಂಪುಟವನ್ನು ಮಹಾಕಾವ್ಯವೆಂದು ಪರಿಗಣಿಸಬಹುದು.
ಡಾ| ಕೆ. ಚಿನ್ನಪ್ಪ ಗೌಡ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ
ವಿಶ್ರಾಂತ ಕುಲಪತಿ