Advertisement
ಕರಾವಳಿ ಬೈಪಾಸ್‌ನಿಂದ ಆದಿವುಡುಪಿ, ಪಂದುಬೆಟ್ಟು ಕಲ್ಮಾಡಿ, ಮಲ್ಪೆವರೆಗಿನ ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿದ್ದು ರಸ್ತೆ ಎಲ್ಲಿದೆ ಎನ್ನುವುದನ್ನು ಹುಡುಕುವ ಪರಿಸ್ಥಿತಿ ಇಲ್ಲಿ ಸಾಮಾನ್ಯವಾಗಿದೆ. ಹೊಂಡ ಗುಂಡಿಗಳಿಂದ ರಾಚುತ್ತಿದ್ದ ಈ ರಸ್ತೆ ವಾಹನ ಸವಾರರ ಜೀವಕ್ಕೆ ಕಂಟಕವಾಗಿದೆ. ಒಂದು ಹೊಂಡವನ್ನು ತಪ್ಪಿಸಲು ಹೋಗಿ ಇನ್ನೊಂದು ಹೊಂಡಕ್ಕೆ ಬಿದ್ದು ರಸ್ತೆಯಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಂಬಂಧಪಟ್ಟ ಆಡಳಿತ ಮಾತ್ರ ದಿವ್ಯಮೌನ ವಹಿಸಿದೆ ಎಂದು ಆರೋಪಿಸಲಾಗಿದೆ.
Related Articles
Advertisement
ಯಾರೂ ಗಮನಹರಿಸುತ್ತಿಲ್ಲಹೆದ್ದಾರಿ ಎನ್ನುವ ಬದಲು ಇದನ್ನು ಹೊಂಡಗುಂಡಿಗಳ ದಾರಿ ಎಂದರೂ ತಪ್ಪಿಲ್ಲ. ದಿನನಿತ್ಯವೂ ಜಿಲ್ಲೆಯ ಸಾವಿರಾರು ವಾಹನಗಳಿಗೆ ಆಸರೆಯಾಗಿರುವ ಈ ಹೆದ್ದಾರಿಗಳು ಮರಣ ಗುಂಡಿಗಳಾಗಿ ಬದಲಾಗಿದೆ. ಸಂಬಂಧಪಟ್ಟವರಿಗೆ ಮಳೆಗಾಲದ ಮೊದಲೇ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲಿ ಹಲವಾರು ಬಾರಿ ದೂರಿಕೊಳ್ಳಲಾಗಿತ್ತು. ಯಾರೂ ಇತ್ತ ಗಮನಹರಿಸಲೇ ಇಲ್ಲ.
-ಪ್ರದೀಪ್ ಟಿ. ಮೆಂಡನ್, ಸ್ಥಳೀಯರು ಸದ್ಯ ತಾತ್ಕಾಲಿಕ ಪರಿಹಾರ
ಇಲ್ಲಿನ ರಸ್ತೆಯ ವಿಸ್ತರಣೆ ಯೋಜನೆ ಇರುವುದರಿಂದ ಹೆಚ್ಚೇನು ಮಾಡಲು ಸಾಧ್ಯವಾಗುವುದಿಲ್ಲ. ಸದ್ಯ ಹೊಂಡಕ್ಕೆ ಸಿಮೆಂಟ್ ಮಿಶ್ರಿತ ಜಲ್ಲಿಯನ್ನು ಹಾಕುವ ಕೆಲಸವನ್ನು ನಡೆಯುತ್ತದೆ. ಮಳೆ ಮುಗಿದ ಮೇಲೆ ಪೂರ್ಣ ಡಾಮರು ಕಾಮಗಾರಿ ಮಾಡಲಾಗುವುದು.
-ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ