Advertisement

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸೇವೆ ಶ್ಲಾಘನೀಯ

04:51 PM Oct 09, 2021 | Team Udayavani |

ಚನ್ನಪಟ್ಟಣ: ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯ, ಸೇವಾ ಮನೋಭಾವನೆ ಹೊಂದಿರುವ ಏಕೈಕ ಧಾರ್ಮಿಕ ಸಂಸ್ಥೆ ಇದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಲಿಂಗಯ್ಯ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಚನ್ನಪಟ್ಟಣ, ಜಿಲ್ಲಾ ಜನ ಜಾಗೃತಿ ವೇದಿಕೆ ರಾಮನಗರ ಹಾಗೂ ಸ್ವ-ಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಮತ್ತು ವ್ಯಸನ ಮುಕ್ತ ಸಾಧಕರ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹೆಸರಲ್ಲೇ ಧರ್ಮ ಹೊಂದಿರುವ ಧರ್ಮಸ್ಥಳದ ಸೇವಾಕಾರ್ಯ ಶ್ಲಾಘನೀಯ, ಸಾರ್ವಜನಿಕರ ಕಲ್ಯಾಣಕ್ಕಾಗಿ ತನ್ನದೇ ಆದ ನಿರಂತರ ಸೇವೆಯಿಂದ ರಾಜ್ಯದಲ್ಲಿ ಗುರುತಿಸಿ ಕೊಂಡಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಸಮಾಜದ ಜನರ ಅಭಿವೃದ್ಧಿಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿದೆ.

ಇದನ್ನೂ ಓದಿ;- ವಿರಾಟ್ ಕೊಹ್ಲಿ ಹೇಳಿದ ಒಂದು ಮಾತಿನಿಂದ ಇಶಾನ್ ಕಿಶಾನ್ ಬ್ಯಾಟಿಂಗ್ ವೈಖರಿಯೇ ಬದಲಾಯಿತು!

ಹೊಸ ಬದುಕು ಕಟ್ಟಿಕೊಡುತ್ತಿದೆ: ಮದ್ಯಮುಕ್ತ ಸಾಧಕರಿಗೆ ಸನ್ಮಾನ ಮಾಡಿ ಮಾತನಾಡಿ, ತಾಲೂಕು ಪೊಲೀಸ್‌ ಉಪವಿಭಾಗಾಧಿಕಾರಿ ಕೆ.ಎನ್‌.ರಮೇಶ್‌, ದೇಶದಲ್ಲಿಯೇ ತನ್ನದೇ ಭಕ್ತಸಮೂಹ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಧರ್ಮಸ್ಥಳ, ರಾಜ್ಯದ ರೈತರಿಂದ ಪ್ರಾರಂಭವಾಗಿ, ಹೆಣ್ಣು ಮಕ್ಕಳ ಸ್ವಾವಲಂಬಿಬದುಕು ರೂಪಿಸಲು ಸಹಕಾರಿಯಾಗಿದೆ. ಅಲ್ಲದೇ ಮದ್ಯವ್ಯಸನ, ಮದ್ಯಮುಕ್ತರನ್ನಾಗಿ ಮಾಡಿ ಹೊಸ ಬದುಕು ರೂಪಿಸುತ್ತಿದೆ ಎಂದು ಹೇಳಿದರು.

ಮದ್ಯವ್ಯಸನಿಗಳಿಗೆ ಆಧ್ಯಾತ್ಮಿಕ ಮಾರ್ಗ: ಲಕ್ಷಾಂತರ ಕುಟುಂಬಗಳ ದಾರಿ ದೀಪವಾಗಿರುವ ಧರ್ಮಸ್ಥಳ ನಿಜಕ್ಕೂ ಧರ್ಮವೇ ಎಂದರೇ ತಪ್ಪಾಗಲಾರದು,ಕುಡಿತದ ಚಟ ಕಲಿಯುವುದು ಸುಲಭ ಆದರೆ ಚಟ ಬಿಡುವುದು ಕಷ್ಟ. ಮಂಜುನಾಥನ ಸ್ಮರಣೆಯಿಂದ ಮದ್ಯವ್ಯಸನ ಮುಕ್ತರನ್ನಾಗಿ ಮಾಡಿ, ಮದ್ಯ ತ್ಯಜಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿ ಅವರಲ್ಲಿ ಹೊಸ ಚೈತನ್ಯ ತುಂಬುತ್ತಿರುವ ಶ್ಲಾಘನೀಯ ಎಂದರು.

Advertisement

ಸೇವಾಕಾರ್ಯಕ್ಕೆ ಕೈ ಜೋಡಿಸಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಜಿಲ್ಲಾ ನಿರ್ದೇಶಕ ಶ್ರೀನಿವಾಸ್‌ ಮಾತನಾಡಿ, ಶ್ರೀ ಕ್ಷೇತ್ರ ಕೈಗೊಂಡಿರುವ ಕಾರ್ಯಗಳು ಸಮರೋಪಾದಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಸಹಕಾರಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಜನಕಲ್ಯಾಣ ಕಾರ್ಯ: ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷಚಿಕ್ಕಣ್ಣಯ್ಯ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೈಗೊಂಡಿರುವ ಜನಪರ ಕಾರ್ಯಕ್ರಮಗಳು, ಸರ್ಕಾರಗಳು ಕೈಗೊಳ್ಳುವ ಕಾರ್ಯಗಳಾಗಿವೆ, ಮನುಷ್ಯ ನೆಮ್ಮದಿಯ ತಾಣಗಳಾಗುವ ದೇವಸ್ಥಾನಗಳು, ಜನರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವುದು ಪ್ರಶಂಸನೀಯ ವಿಚಾರವಾಗಿದೆ ಎಂದರು.

ನವಜೀವನ ಸಮಿತಿ ಮದ್ಯವ್ಯಸನ ಮುಕ್ತಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ದೇವರಾಜೇಗೌಡ, ಮಾಯಿಗೇಗೌಡ, ಯೋಜನಾಧಿಕಾರಿ ರೇಷ್ಮಾ ಹಾಗೂ ಹಲವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next