Advertisement

ಅಧ್ಯಕ್ಷ ಇನ್ ಅಮೆರಿಕಾ: ಯೋಗಾನಂದ್ ಪಾಲಿಗೆ ಯೋಗಾಯೋಗ!

09:40 AM Oct 02, 2019 | Hari Prasad |

ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ಈ ವಾರ ತೆರೆಗಾಣುತ್ತಿದೆ. ರಾಗಿಣಿ ಮತ್ತು ಶರಣ್ ಜೋಡಿಯ ಮೊದಲ ಮೋಡಿ ತೆರೆಯ ಮೇಲೆ ಮೂಡಿ ಬರುವುದಕ್ಕೆ ಇದೀಗ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ವ್ಯಾಪಕ ಕುತೂಹಲಕ್ಕೆ ಕಾರಣವಾಗಿರೋ ಈ ಚಿತ್ರ ಶರಣ್ ವೃತ್ತಿ ಬದುಕಿನಲ್ಲಿಯೇ ಮಹತ್ವದ್ದಾಗಿಯೂ ಪರಿಗಣಿಸಲ್ಪಟ್ಟಿದೆ. ಈ ಮೂಲಕವೇ ಯುವ ನಿರ್ದೇಶಕ ಯೋಗಾನಂದ್ ಪಾಲಿಗೆ ಅಚಾನಕ್ಕಾಗಿ ಭರ್ಜರಿ ಯೋಗವೊಂದು ಕೈ ಹಿಡಿದಂತಾಗಿದೆ.

Advertisement

ಈ ಸಿನಿಮಾವನ್ನು ನಿರ್ದೇಸನ ಮಾಡಿರುವವರು ಯೋಗಾನಂದ್ ಮುದ್ದಾನ್. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ನಿರ್ದೇಶನ ಮಾಡೋ ಭಾಗ್ಯ ಯೋಗಾನಂದ್ ಪಾಲಿಗೆ ಕೂಡಿ ಬಂದಿದ್ದೇ ಒಂದು ಅಚ್ಚರಿ.

ಈ ಹಿಂದೆ ದಶಕಗಳಿಗೂ ಹೆಚ್ಚು ಕಾಲ ಕಿರುತೆರೆಯಲ್ಲಿ ಸಕ್ರಿಯರಾಗಿದ್ದವರು ಯೋಗಾನಂದ್. ಹಲವಾರು ಹಿಟ್ ಧಾರಾವಾಹಿಗಳ ಬರಹಗಾರರಾಗಿ ಕಾರ್ಯ ನಿರ್ವಹಿಸಿದ್ದ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾದತ್ತ ಹೊರಳಿಕೊಂಡಿದ್ದರು. ಅಧ್ಯಕ್ಷ ಇನ್ ಅಮೆರಿಕಾ ಚಿತ್ರಕ್ಕೂ ಅವರು ಆರಂಭದಲ್ಲಿ ಎಂಟ್ರಿ ಕೊಟ್ಟಿದ್ದು ಡೈಲಾಗ್ ರೈಟರ್ ಆಗಿ.

ಆದರೆ ಅವರ ಕಾರ್ಯ ವೈಖರಿ ಮತ್ತು ಚುರುಕುತನಗಳೇ ನಿರ್ದೇಶನದ ಆಫರ್ ಅನ್ನೂ ಮುಂದಿಟ್ಟಿದ್ದವು. ಒಮದೊಳ್ಳೆ ಚಿತ್ರ ನಿರ್ದೇಶನ ಮಾಡಬೇಕೆಂಬ ಕನಸಿಟ್ಟುಕೊಂಡಿದ್ದ ಯೋಗಾನಂದ್ ಆ ಅವಕಾಶವನ್ನು ಮನಸಾರೆ ಒಪ್ಪಿಕೊಂಡು ಮೂಲ ಕಥೆಯನ್ನು ನಮ್ಮ ನೇಟಿಟಿಗೆ ಒಗ್ಗಿಸಿಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರಂತೆ. ಅವರಿಲ್ಲಿ ಇದುವರೆಗೆ ನೋಡಿದ್ದಕ್ಕಿಂತ ಭಿನ್ನವಾದ ಶರಣ್ ಅವರನ್ನು ಪ್ರೇಕ್ಷಕರ ಮುಂದೆ ಮುಖಾಮುಖಿಯಾಗಿಸುವ ಪಣ ತೊಟ್ಟು ಅದರಲ್ಲಿ ಯಶ ಕಂಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿಯೇ ಹಿಟ್ ಆಗಲಿದೆ ಎಂಬ ಭರವಸೆಯೂ ಅವರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next