Advertisement
“ಬರ’ ಎಂಬುದು ಕೆಲವರಿಗೆ ವರವಿದ್ದಂತೆ. ಸರ್ಕಾರಿ ಅನುದಾನವೇ ಇರಲಿ, ಸಹೃದಯಿಗಳ ದೇಣಿಗೆಯೇ ಇರಲಿ. ಜನಸೇವೆ ಹೆಸರಲ್ಲಿ ಜೇಬಿಗಿಳಿ ಸುವವರೇ ಹೆಚ್ಚು. ಈ ಹಿನ್ನೆಲೆಯಲ್ಲಿ ಇನ್ಫೊಸಿಸ್ ಹಾಗೂ ಸಂಕಲ್ಪ ಸಂಸ್ಥೆಗಳು ನೀರು ಪೂರೈಕೆ ಯನ್ನು ಪಾರದರ್ಶಕ ಗೊಳಿ ಸಲು ಮುಂದಾಗಿದ್ದು, ಈ ನಿಟ್ಟಿ ನಲ್ಲಿ “ಜಲ ಧಾರೆ’ ಕಾರ್ಡ್ ವಿತರಿಸಿವೆ. ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ 26 ಗ್ರಾಮಗಳನ್ನು ಆಯ್ದುಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳು, 5 ಗ್ರಾಮಗಳಲ್ಲಿ ನೀರು ಸರಬರಾಜು ಆರಂಭಿಸಿವೆ. ಈ ಪೈಕಿ ಲಕ್ಕಲಕಟ್ಟಿ, ಹಳ್ಳಿಕೇರಿ, ಸಿಂಗಟರಾಯನಕೆರೆ, ಸಿಂಗಟರಾಯನ ಕೆರೆ ತಾಂಡಾ ಹಾಗೂ ದಿಂಡೂರು ಗ್ರಾಮ ಸ್ಥರಿಗೆ “ಜಲಧಾರೆ’ ಕಾರ್ಡ್ ವಿತರಿಸಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿವೆ.
ಸಂಸ್ಥೆಯ ಗಣಕ ಯಂತ್ರದಲ್ಲಿ ಎಲ್ಲ ಮಾಹಿತಿ ದಾಖಲಿಸಲಾಗುತ್ತದೆ. ಬಳಿಕ, ಬಾರ್‌ಕೋಡ್ ಆಧರಿತ “ಜಲಧಾರೆ’
ಎಂಬ ಕಾರ್ಡ್‌ನ್ನು ಅಭಿವೃದ್ಧಿ ಪಡಿಸಿ, ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಟ್ಯಾಂಕರ್ ನೀರು
ಬಿಡುವಾಗ ಜನರಿಂದ ಕಾರ್ಡ್ ಪಡೆಯುವ ಸಂಸ್ಥೆಯ ಸ್ವಯಂ ಸೇವಕರು, ಅದನ್ನು ತಮ್ಮ ಮೊಬೈಲ್ ಆ್ಯಪ್ ಮೂಲಕ
ಬಾರ್‌ಕೋಡ್ ರೀಡ್ ಮಾಡಿ, ಆನ್ ಲೈನ್‌ನಲ್ಲಿ ಮುಖ್ಯ ಕಚೇರಿಗೆ ಮಾಹಿತಿ ರವಾನಿಸುತ್ತಾರೆ. ಇದರಿಂದಾಗಿ ನೀರು
ಪೂರೈಕೆ ಬಗ್ಗೆ ಸಮಗ್ರ ಮಾಹಿತಿ ಸಿಗುತ್ತದೆ. ಇದರಿಂದಾಗಿ ದೇಣಿಗೆ ನೀಡುವವರಿಗೆ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಜೊತೆಗೆ, ನೀರು ಪೂರೈಕೆ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುತ್ತದೆ ಎಂಬುದು ಸಂಸ್ಥೆಯ ಅಭಿಪ್ರಾಯ. ಬರ ಪೀಡಿತ ಗ್ರಾಮಗಳಿಗೆ ನೀರು ಪೂರೈಕೆಯಲ್ಲಿ ನಡೆಯುವ ಅಕ್ರಮಗಳ ಕಡಿವಾಣಕ್ಕೆ “ಜಲಧಾರೆ’ ಕಾರ್ಡ್ ಸರ್ಕಾರಕ್ಕೂ ಮಾದರಿ ಎಂಬುದು ಸಾರ್ವಜನಿಕರ ಅಭಿಪ್ರಾಯ.