Advertisement
ಮೂರು ದಶಕಗಳ ಕಾಲ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು ನಿವೃತ್ತಿಗೆ ಮೂರು ವರ್ಷ ಬಾಕಿ ಇರುವಂತೆಯೇ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ (ಸ್ವಯಂ ನಿವೃತ್ತಿ) ನೀಡುತ್ತಿರುವುದಾಗಿ ಪತ್ರವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ಬಿ.ರವಿಕುಮಾರ್ ಅವರಿಗೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆ ಇನ್ನೂ ಅಂಗೀಕಾ ರವಾಗಿಲ್ಲ.
Related Articles
ಭಾಸ್ಕರ್ ರಾವ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗಿದೆ. ಅವರು ಆಮ್ ಆದ್ಮಿ ಪಾರ್ಟಿ (ಆಪ್) ಅಥವಾ ಕಾಂಗ್ರೆಸ್ ಸೇರಿ ಬಸ ವನಗುಡಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಸರಕಾರದಿಂದ ಅವಗಣನೆ?ಈ ನಡುವೆ ಕನ್ನಡಿಗ ಐಪಿಎಸ್ ಅಧಿಕಾರಿಗಳನ್ನು ಸರಕಾರ ಅವಗಣಿಸುತ್ತಿದೆ ಹಾಗೂ ಅವರಿಗೆ ಸೂಕ್ತ ಉನ್ನತ ಹುದ್ದೆ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ್‌ರಾವ್ ಅವರು ಎಕ್ಸಿಕ್ಯೂಟಿವ್ ಸೇವೆಗಿಂತ ನಾನ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿಯೇ ಹೆಚ್ಚು ಸೇವೆ ಸಲ್ಲಿಸಿದ್ದರು. ಒಂದೂವರೆ ವರ್ಷದಿಂದ ಅವರನ್ನು ಸರಕಾರ ಅವಗಣಿಸುತ್ತಿದ್ದು, ಅದೇ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜಕೀಯ ಸೇರುವ ಬಗ್ಗೆ ಸದ್ಯಕ್ಕೆ ಯೋಚನೆ ಇಲ್ಲ. ಯಾವುದೇ ಪಕ್ಷದ ಜತೆಯೂ ಚರ್ಚಿಸಿಲ್ಲ. ಮುಂದಿನ ನಿರ್ಧಾರ ಏನು ಎಂಬುದು ನಿರ್ಧರಿಸಿಲ್ಲ.
-ಭಾಸ್ಕರ್ ರಾವ್