Advertisement

ಸಮರ್ಪಕ ವೋಟರ್‌ ಸ್ಲಿಪ್‌ ಹಂಚಿಕೆ ಶೀಘ್ರ

04:38 AM Apr 13, 2019 | Team Udayavani |

ಬೆಂಗಳೂರು: ನಗರದಲ್ಲಿ ಈಗಾಗಲೇ ವೋಟರ್‌ ಸ್ಲಿಪ್‍ಗಳು ಸಿದ್ಧಗೊಂಡಿದ್ದು, ಶೀಘ್ರ ಗೈಡ್‌ ಸಹಿತ ಮತದಾರರ ಕೈಸೇರಲಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

Advertisement

“ಉದಯವಾಣಿ’ ಮತದಾನ ಜಾಗೃತಿ ಅಭಿಯಾನದ ಭಾಗವಾಗಿ ಶುಕ್ರವಾರ ಪತ್ರಿಕೆ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು. ಈ ಹಿಂದಿನ ಚುನಾವಣೆಗಳಲ್ಲಿ ನಗರದಲ್ಲಿ ತುಸು ಸಮಸ್ಯೆ ಆಗುತ್ತಿತ್ತು. ಆದರೆ, ಈ ಸಲ ಸಮರ್ಪಕವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಜತೆಗೆ ನಿರಂತರವಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಮತದಾನ ಸಾಕ್ಷರತಾ ಕ್ಲಬ್‌, “ಸ್ವೀಪ್‌’ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.

ಮತದಾನ ಪ್ರಮಾಣ ಹೆಚ್ಚಿಸಲು ಈ ಬಾರಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದೇ ಮೊದಲ ಬಾರಿಗೆ ನಗರದಲ್ಲಿರುವ ಐಟಿ ಸೇರಿದಂತೆ ವಿವಿಧ ಖಾಸಗಿ ಕಂಪೆನಿಗಳು ಮತದಾನ ಜಾಗೃತಿಗೆ ಕೈಜೋಡಿಸಿವೆ.

ಅಲ್ಲೆಲ್ಲಾ ಮತದಾನ ಸಾಕ್ಷರತಾ ಕ್ಲಬ್‌ಗಳನ್ನು ರಚಿಸಿದ್ದು, ಆಯಾ ಕಂಪೆನಿಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರೇ ಸಮನ್ವಯಾಧಿಕಾರಿಗಳಾಗಿದ್ದಾರೆ.

Advertisement

ಮತದಾನದಂದು ವೇತನಸಹಿತ ರಜೆ ನೀಡುತ್ತಾರೆ. ಮತದಾನದಂದು ನೀಡುವ ರಜೆ ಔಟಿಂಗ್‌ ಹೋಗಲಿಕ್ಕಲ್ಲ. ನಾಗರಿಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು. ಆದ್ದರಿಂದ ತಪ್ಪದೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಮತದಾನ ಗೌಪ್ಯತೆ ಕಾಪಾಡುತ್ತಿಲ್ಲ: “ಮಾಧ್ಯಮಗಳು ಮತದಾನ ಗೌಪ್ಯತೆ ಕಾಪಾಡುತ್ತಿಲ್ಲ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು. “ಮತದಾನದ ಗೌಪ್ಯತೆ ಕಾಪಾಡುವುದು ಎಲ್ಲರ ಕರ್ತವ್ಯ.

ಆದರೆ, ಮತದಾರರನ್ನು ಯಾರಿಗೆ ಮತ ಹಾಕುತ್ತೀರಿ ಎಂದು ಕೇಳುವ ಹಾಗೂ ಅದನ್ನು ಪ್ರಸಾರ ಮಾಡುವ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಈ ವಿಚಾರದಲ್ಲಿ ಗೌಪ್ಯತೆ ನಿಭಾಯಿಸುತ್ತಿಲ್ಲ ಎಂದು ಮಾತ್ರ ನಾನು ಹೇಳುತ್ತೇನೆ ಅಷ್ಟೇ. ಇದನ್ನು ತಾವೇ (ಮಾಧ್ಯಮಗಳು) ಯೋಚನೆ ಮಾಡಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next