Advertisement

ಕೋಲ್ಕತಾ: ಅಡೆನೋ ವೈರಸ್‌ಗೆ ಮತ್ತೆ 3 ಮಕ್ಕಳ ಸಾವು

01:00 AM Mar 09, 2023 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಅಡೆನೋ ವೈರಸ್‌ಗೆ ತುತ್ತಾಗುತ್ತಿರುವ ಮಕ್ಕಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರವೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

Advertisement

ಇದರೊಂದಿಗೆ 11 ದಿನಗಳಲ್ಲಿ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ಕೋಲ್ಕತಾ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈರಸ್‌ನಿಂದ 10 ತಿಂಗಳ ಮಗು, 6 ತಿಂಗಳ ಹಸುಗೂಸು, ಬಿ.ಸಿ. ರಾಯ್‌ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ 10 ತಿಂಗಳ ಮಗು ಅಸುನೀಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದ ಪೋಷಕರು ಭಯಭೀತರಾಗಿದ್ದಾರೆ. ಪಶ್ಚಿಮ ಬಂಗಾಲ ಸರಕಾರ ಕೂಡ ಆರೋಗ್ಯ ಸಿಬಂದಿಗೆ ರಜೆ ಕೂಡ ನೀಡದೆ, ಮಕ್ಕಳ ಆರೈಕೆಯಲ್ಲಿ ತೊಡಗಿಸಿ, ಪ್ರಕರಣ ತಡೆಗಟ್ಟುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next