Advertisement

Adelaide Test: ಭಾರತಕ್ಕೆ ಹಗಲು-ರಾತ್ರಿ ಅಭ್ಯಾಸ ಪಂದ್ಯ

12:49 AM Nov 30, 2024 | Team Udayavani |

ಕ್ಯಾನ್‌ಬೆರಾ: ಪರ್ತ್‌ ಟೆಸ್ಟ್‌ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತವಿನ್ನು ಡಿ. 6ರಿಂದ “ಅಡಿಲೇಡ್‌ ಓವಲ್‌’ ನಲ್ಲಿ ದ್ವಿತೀಯ ಟೆಸ್ಟ್‌ ಆಡಲಿಳಿಯಲಿದೆ. ಇದು ಹಗಲು-ರಾತ್ರಿ ಟೆಸ್ಟ್‌ ಪಂದ್ಯ. ಇದಕ್ಕೆ ಪೂರ್ವಭಾವಿಯಾಗಿ ಕ್ಯಾನ್‌ಬೆರಾದಲ್ಲಿ ಶನಿವಾರ ಮತ್ತು ರವಿವಾರ ಆಸ್ಟ್ರೇಲಿಯನ್‌ ಪ್ರೈಮ್‌ ಮಿನಿಸ್ಟರ್ ಇಲೆವೆನ್‌ ವಿರುದ್ಧ 2 ದಿನಗಳ ಅಭ್ಯಾಸ ಪಂದ್ಯವನ್ನು ಭಾರತ ಆಡಲಿದೆ. ಆಸ್ಟ್ರೇಲಿಯಕ್ಕೆ ಆಗಮಿಸಿರುವ ನಾಯಕ ರೋಹಿತ್‌ ಶರ್ಮ ಇಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

4 ವರ್ಷಗಳ ಹಿಂದೆ ಅಡಿಲೇಡ್‌ನ‌ಲ್ಲೇ ಆಡಲಾಗಿದ್ದ ಡೇ ನೈಟ್‌ ಟೆಸ್ಟ್‌ ಪಂದ್ಯದಲ್ಲಿ 36ಕ್ಕೆ ಆಲೌಟ್‌ ಆಗಿ ಹೀನಾಯ ಸೋಲನುಭವಿಸಿದ್ದ ಭಾರತ, ಅನಂತರ ಸರಣಿ ಗೆದ್ದು ಬೀಗಿದ್ದು ಈಗ ಇತಿಹಾಸ. ಹೀಗಾಗಿ ಈ ಬಾರಿಯ ಅಡಿಲೇಡ್‌ ಟೆಸ್ಟ್‌ನಲ್ಲಿ ಇಂಥ ಕಳಪೆ ನಿರ್ವಹಣೆ ಮರುಕಳಿಸಬಾರದೆಂದು ಟೀಮ್‌ ಇಂಡಿಯಾ ಪಣ ತೊಟ್ಟಿದೆ. ಹೀಗಾಗಿ ಎರಡೇ ದಿನಗಳ ಮುಖಾಮುಖೀಯಾದರೂ ಈ ಅಭ್ಯಾಸ ಪಂದ್ಯವನ್ನು ಗಂಭೀರವಾಗಿ ಆಡುವುದರಲ್ಲಿ ಅನುಮಾನವಿಲ್ಲ.
ಬ್ಯಾಟಿಂಗ್‌ ಸರದಿಯ “ನೀಲನಕ್ಷೆ’ಇದಕ್ಕೆ ಪ್ರಥಮ ದರ್ಜೆ ಪಂದ್ಯದ ಮಾನ್ಯತೆಯೇನಿಲ್ಲ. ಆದರೆ ಅಡಿಲೇಡ್‌ ಟೆಸ್ಟ್‌ ಪಂದ್ಯದ ಆಡುವ ಬಳಗದ ಗೊಂದಲವನ್ನು ಸುಲಲಿತವಾಗಿ ಬಗೆಹರಿಸಿಕೊಳ್ಳುವ ಹಿನ್ನೆಲೆಯಲ್ಲಿ ಭಾರತಕ್ಕೆ ಇದೊಂದು ಪ್ರಮುಖ ಪಂದ್ಯವಾಗಿದೆ. ರೋಹಿತ್‌ ಶರ್ಮ, ಶುಭಮನ್‌ ಗಿಲ್‌ ದ್ವಿತೀಯ ಟೆಸ್ಟ್‌ನಲ್ಲಿ ಕಣಕ್ಕಿಳಿಯಬೇಕಿದೆ. ಹಾಗೆಯೇ ಸಫ‌ìರಾಜ್‌ ಖಾನ್‌ ಕೂಡ ರೇಸ್‌ನಲ್ಲಿದ್ದಾರೆ. ಹೀಗಾಗಿ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಸರದಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಲೇಬೇಕಿದೆ. ಇದರ “ನೀಲನಕ್ಷೆ’ ಅಭ್ಯಾಸ ಪಂದ್ಯದಲ್ಲಿ ಮೂಡಿಬರಬೇಕಿದೆ.

ಪರ್ತ್‌ ಟೆಸ್ಟ್‌ ಪಂದ್ಯವನ್ನು ಸೋತರೂ ಆಸ್ಟ್ರೇಲಿಯ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಅಭ್ಯಾಸ ಪಂದ್ಯದಲ್ಲಿ ಆಡಲಿರುವ ಮ್ಯಾಟ್‌ ರೆನ್‌ಶಾ, ಸ್ಕಾಟ್‌ ಬೋಲ್ಯಾಂಡ್‌ ಅವರೆಲ್ಲ ಟೆಸ್ಟ್‌ ಆಡಿದವರೇ ಆಗಿದ್ದಾರೆ. ಬೋರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಆಡುವ ಅವಕಾಶಕ್ಕಾಗಿ ಕಾದಿರುವುದರಲ್ಲಿ ಅನುಮಾನವಿಲ್ಲ. ಜಾಕ್‌ ಎಡ್ವರ್ಡ್ಸ್‌ ಆತಿಥೇಯ ತಂಡವನ್ನು ಮುನ್ನಡೆಸಲಿದ್ದಾರೆ.

ನೆಟ್ಸ್‌ಗೆ ಮರಳಿದ ಗಿಲ್‌
ಕೈಬೆರಳಿನ ಮೂಳೆ ಮುರಿತಕ್ಕೊಳಗಾದ ಶುಭಮನ್‌ ಗಿಲ್‌ ಈಗ ಚೇತರಿಸಿಕೊಂಡಿದ್ದು, ಶುಕ್ರವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಇದರಿಂದ ಅವರು ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುವ ಎಲ್ಲ ಸಾಧ್ಯತೆ ಇದೆ. ನೆಟ್ಸ್‌ನಲ್ಲಿ ಅವರು ಯಶ್‌ ದಯಾಳ್‌ ಮತ್ತು ಆಕಾಶ್‌ದೀಪ್‌ ಅವರ ಎಸೆತಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಎದುರಿಸಿದರು.

 ಆರಂಭ: ಬೆಳಗ್ಗೆ 9.10
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next