Advertisement

ಅಡಿಲೇಡ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕ್ವಾ. ಫೈನಲ್‌ಗೆ ಮೆಡ್ವೆಡೇವ್‌ 

10:10 PM Jan 04, 2023 | Team Udayavani |

ಅಡಿಲೇಡ್‌: ಮಾಜಿ ನಂ.1 ಆಟ ಗಾರ ಡ್ಯಾನಿಲ್‌ ಮೆಡ್ವೆಡೇವ್‌ “ಅಡಿಲೇಡ್‌ ಇಂಟರ್‌ನ್ಯಾಶನಲ್‌ ಟೆನಿಸ್‌’ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅವರು ಸರ್ಬಿಯಾದ ಮಿಯೋಮಿರ್‌ ಕೆಮ್ಕ ನೋವಿಕ್‌ ವಿರುದ್ಧ 6-0, 6-3 ಅಂತರದ ಗೆಲುವು ಸಾಧಿಸಿದರು.

Advertisement

ಮೆಡ್ವೆಡೇವ್‌ ಅವರ ಮುಂದಿನ ಎದುರಾಳಿ ರಷ್ಯಾದವರೇ ಆದ ಕರೆನ್‌ ಕಶನೋವ್‌. ಅವರು ಬ್ರಿಟನ್‌ನ ಜಾಕ್‌ ಡ್ರೇಪರ್‌ ವಿರುದ್ಧ 6-4, 6-2ರಿಂದ ಗೆದ್ದು ಬಂದರು.

ಅಗ್ರ ಶ್ರೇಯಾಂಕದ ನೊವಾಕ್‌ ಜೊಕೋ ವಿಕ್‌ ಗುರುವಾರ 3ನೇ ಸುತ್ತಿನ ಪಂದ್ಯ ಆಡಲಿದ್ದು, ಗೆದ್ದರೆ ಕ್ವಾರ್ಟರ್‌ ಫೈನಲ್‌ ತಲುಪಲಿದ್ದಾರೆ. ಆಸ್ಟ್ರೇಲಿಯ ನೆಲದಲ್ಲಿ ಸತತ 30 ಸಿಂಗಲ್ಸ್‌ ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆ ಜೊಕೋ ಅವರದು. ಮೆಡ್ವೆಡೇವ್‌-ಜೊಕೋವಿಕ್‌ ಸೆಮಿಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಹೆಚ್ಚಿದೆ.ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಅರಿನಾ ಸಬಲೆಂಕಾ ಮತ್ತು ಮಾರ್ಕೆಟಾ ವೊಂಡ್ರೂಸೋವಾ ಪರಸ್ಪರ ಎದುರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next