ಚಿಕ್ಕಮಗಳೂರು: ಕೋವಿಡ್ ಸೋಂಕು ಚಿಕಿತ್ಸೆ ನೆಪದಲ್ಲಿ ಹೆಚ್ಚುವರಿ ಬಿಲ್ ಪಡೆದಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಬೇಕೆಂದು ವಿವಿಧ ಸಂಘಟನೆಗಳು ಮತ್ತು ಸಂತ್ರಸ್ತ ಕುಟುಂಬಸ್ಥರು ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದರು.
ಮೃತ ವ್ಯಕ್ತಿಯ ಸಂಬಂಧಿ ಎಚ್.ಒ. ಪ್ರಸನ್ನಕುಮಾರ್ ಎಂಬುವರು ಜಿಲ್ಲಾ ಧಿಕಾರಿಗೆ ಲಿಖೀತ ದೂರು ನೀಡಿ, ನನ್ನ ಮಾವ ನಂಜುಂಡಪ್ಪ ಅವರನ್ನು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಮ್ಲಜನಕದ ಕೊರತೆ ಇದೆ ಎಂದು ಐಸಿಯೂಗೆ ಆಸ್ಪತ್ರೆ ಸಿಬ್ಬಂದಿ ದಾಖಲಿಸಿಕೊಂಡಿದ್ದರು. ಕೋವಿಡ್ ಆಂಟಿಜನ್ ಪರೀಕ್ಷೆ ಮಾಡಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ವಾರ್ಡಿಗೆ ಸ್ಥಳಾಂತರ ಮಾಡಿದ್ದರು. ಮತ್ತೆ ಆಮ್ಲಜನಕದ ಕೊರತೆ ನೆಪಹೇಳಿ ಐಸಿಯುಗೆ ದಾಖಲಿಸಿದರು.
ಆಸ್ಪತ್ರೆಯವರು ಶವ ನೀಡಲು 9,25,600 ರೂ ಪಾವತಿಸುವಂತೆ ಒತ್ತಾಯಿಸಿದರು. ಅದರಂತೆ 9,25,600 ರೂ. ಪಾವತಿಸಿದ್ದೇವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಹಣ ವಸೂಲಿ ಮಾಡಿರುವ ಖಾಸಗಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬಿಲ್ ಪಡೆದಿರುವ ಬಗ್ಗೆ ಲಿಖೀತ ದೂರು ಬಂದಿದೆ. ಡಿಎಚ್‌ಒ ಡಾ| ಉಮೇಶ್ ಅವರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅವರು ಪರಿಶೀಲಿಸಿದ ಬಳಿಕ ನೀಡುವ ವರದಿಯ ಆಧಾರದ ಮೇಲೆ ಆಸ್ಪತ್ರೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು.?-
ಡಾ| ಬಗಾದಿ ಗೌತಮ್, ಜಿಲ್ಲಾಧಿಕಾರಿ
ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಕೋ ಚಿಕಿತ್ಸೆಗೆ ಸರ್ಕಾರ ನಿಗಪಡಿಸಿರುವುದಕ್ಕಿಂತ ಹೆಚ್ಚಿನ ಬಿಲ್ ಮಾಡಲಾಗಿದೆ. ಇಂತಹ ಅನ್ಯಾಯ ಬೇರೆ ಯಾರಿಗೂ ಆಗಬಾರದು. –
ಮೃತ ನಂಜುಂಡಪ್ಪ ಸಂಬಂಧಿ