Advertisement

Nagastra-1 ಶತ್ರುವಿನ ಮನೆಯೊಳಗೇ ನುಗ್ಗಿ ದಾಳಿ ಮಾಡಬಲ್ಲ ಡ್ರೋನ್‌ ಸೇನೆ ಸೇರ್ಪಡೆ!

01:23 AM Jun 15, 2024 | Team Udayavani |

ಹೊಸದಿಲ್ಲಿ: ರಕ್ಷಣ ಕ್ಷೇತ್ರದಲ್ಲಿ ಸ್ವಾವ ಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯೆಂಬಂತೆ, ಸ್ವದೇಶಿ ನಿರ್ಮಿತ ಮೊದಲ ಅಡ್ಡಾಡುವ ಅಸ್ತ್ರ (ಲಾಯಿಟ ರಿಂಗ್‌ ಮ್ಯುನಿಶನ್‌) ನಾಗಾಸ್ತ್ರ-1 ಸೇನೆಯ ಬತ್ತಳಿಕೆಗೆ ಸೇರಿದೆ.
ಸುಸೈಡ್‌ ಡ್ರೋನ್‌ ಎಂದು ಕರೆಯಲ್ಪ ಡುವ ನಾಗಾಸ್ತ್ರ-1ರ ಮೊದಲ ಬ್ಯಾಚ್‌ನಲ್ಲಿ 120 ಡ್ರೋನ್‌ಗಳು ಹಸ್ತಾಂತರ ವಾಗಿದ್ದು, ಇನ್ನೂ 480 ಡ್ರೋನ್‌ಗಳನ್ನು ಸೇನೆ ಖರೀದಿಸಲಿದೆ. ಈ ಡ್ರೋನ್‌ ಸದ್ದಿಲ್ಲದೇ, ಕಣ್ಣಿಗೆ ಸ್ಪಷ್ಟವಾಗಿ ಕಾಣಿಸದೇ ಕಾರ್ಯಾಚರಿಸುವ ಕಾರಣ ಶತ್ರುಗಳ ಮನೆಗೇ ನುಗ್ಗಿ ದಾಳಿ ಮಾಡಬಲ್ಲದು. ಹಾಗಾಗಿ ಭವಿಷ್ಯದಲ್ಲಿ ಸರ್ಜಿಕಲ್‌ ದಾಳಿಗಳಿಗೆ ಯುದ್ಧ ವಿಮಾನಗಳ ಆವಶ್ಯಕತೆ ಬರುವುದಿಲ್ಲ ಎನ್ನಲಾಗಿದೆ.

Advertisement

ಇದನ್ನು ನಾಗಪುರದ ಸೋಲಾರ್‌ ಇಂಡಸ್ಟ್ರೀಸ್‌ ಅಭಿವೃದ್ಧಿಪಡಿಸಿದ್ದು, ಬೆಂಗ ಳೂರಿನ ಝೆಡ್‌-ಮೋಶನ್‌ ಅಟೋನ ಮಸ್‌ ಸಿಸ್ಟಮ್ಸ್‌ ಪ್ರೈ.ಲಿ.ನ ಸಹಭಾಗಿತ್ವದಲ್ಲಿ ಶೇ.75ರಷ್ಟು ದೇಶೀಯ ಬಿಡಿಭಾಗಗಳನ್ನೇ ಬಳಸಿ ವಿನ್ಯಾಸಗೊಳಿಸಲಾಗಿದೆ. 30ಕೆ.ಜಿ ತೂಕ ಹೊಂದಿದ್ದು, ಗ್ರೌಂಡ್‌ ಕಂಟ್ರೋಲ್‌ ಸ್ಟೇಷನ್‌, ಕಮ್ಯೂನಿಕೇಶನ್‌ ಕಂಟ್ರೋಲ್‌, ಪೇಲೋಡ್‌ ಮತ್ತು ನ್ಯುಮ್ಯಾಟಿಕ್‌ ಲಾಂಚರ್‌ಗಳನ್ನು 2 ಭಾಗವಾಗಿ ವಿಂಗಡಿ ಸಿ, ಬ್ಯಾಗ್‌ಗಳಲ್ಲಿ ಹೊತ್ತೂಯ್ಯಬಹುದಾ ಗಿದೆ. ಟ್ರೈಪಾಡ್‌ ಅಥವಾ ಕೈಯಿಂದಲೇ ಉಡಾವಣೆ ಮಾಡಬಹುದು.

ವಿಶೇಷತೆ ಏನು?
1-4 ಕೆ.ಜಿ. ಸಿಡಿ ತಲೆ ಹೊತ್ತು ದಾಳಿ ಸಾಮರ್ಥ್ಯ
60 -90 ನಿಮಿಷ ಹಾರಾಟ
ಮಾನವರಿಂದಲೇ ಸುಲಭ ವಾಗಿ ಸಾಗಿಸಲು ಸಾಧ್ಯ
ಕೈ ಅಥವಾ ಟ್ರೈಪಾಡ್‌ ಮೂಲಕ ಉಡಾವಣೆ

Advertisement

Udayavani is now on Telegram. Click here to join our channel and stay updated with the latest news.

Next