Advertisement

Enemy ಎನ್ನುತ್ತಲೇ ಭಾರತವನ್ನು ಹೊಗಳಿದ ಪಾಕಿಸ್ಥಾನದ ರಾಜಕೀಯ ನಾಯಕ!

01:46 AM Jun 14, 2024 | Team Udayavani |

ಇಸ್ಲಾಮಾಬಾದ್‌: ಭಾರತವನ್ನು “ಶತ್ರು ರಾಷ್ಟ್ರ’ ಎಂದು ಉಲ್ಲೇಖಿಸುತ್ತಲೇ ಭಾರತದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯನ್ನು ಪಾಕಿಸ್ಥಾನದ ರಾಜಕಾರಣಿ ಶಿಬ್ಲಿ ಫ‌ರಾಜ್‌ ಹಾಡಿ ಹೊಗಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಪಾಕಿಸ್ಥಾನ ಸಂಸತ್ತಿನಲ್ಲಿ ಮಾತನಾಡಿ ರುವ ವಿಪಕ್ಷ ನಾಯಕ ಶಿಬ್ಲಿ, “ಶತ್ರುರಾಷ್ಟ್ರವನ್ನು ಉದಾಹರಣೆಯಾಗಿ ನೀಡುವ ಉದ್ದೇಶ ನನಗಿಲ್ಲ. ಆದರೆ ಇತ್ತೀಚೆಗಷ್ಟೇ ಅಲ್ಲಿ ಸಾರ್ವತ್ರಿಕ ಚುನಾ ವಣೆ ಮುಕ್ತಾಯಗೊಂಡಿದೆ. ಅಲ್ಲಿನ 80 ಕೋಟಿಗೂ ಅಧಿಕ ಜನರು ಲಕ್ಷಾಂತರ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ. ಇವಿಎಂಗಳನ್ನು ಬಳಸಿ ತಿಂಗಳುಗಳವರೆಗೆ ಚುನಾವಣೆ ನಡೆಸಿದರೂ ಅಲ್ಲಿ ಯಾರಾದರೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿರುವರೇ? ಅದೇ ರೀತಿಯ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ಪಾಕ್‌ನಲ್ಲಿ ಏಕೆ ನಡೆಸಲು ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಫೆಬ್ರವರಿಯಲ್ಲಿ ನಡೆದ ಪಾಕ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷಗಳು ಆರೋ ಪಿಸುತ್ತಲೇ ಇದ್ದರೂ, ಈ ವಿಚಾರವನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳದೇ ಇರುವ ಹಿನ್ನೆಲೆಯಲ್ಲಿ ಶಿಬ್ಲಿ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next