Advertisement

Theft: ಸ್ವಂತ ಮನೆಯಿಂದಲೇ ಚಿನ್ನ ಕದ್ದ ಬಾಲಕಿ!

11:23 AM Jun 12, 2024 | Team Udayavani |

ಬೆಂಗಳೂರು: ತನ್ನ ಸ್ವಂತ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ 17 ವರ್ಷದ ಬಾಲಕಿ ಸೇರಿ ಆಕೆಯ ಇಬ್ಬರು ಅಪ್ರಾಪ್ತ ಸ್ನೇಹಿತರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಅಭಿರಕ್ಷೆಗೆ ಒಳಪಡಿಸಿ 24.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

Advertisement

ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳ ಗಾದ ಮಕ್ಕಳನ್ನು ಅಭಿರಕ್ಷೆಗೆ ಒಳಪಡಿಸಿ 24.50 ಲಕ್ಷ ರೂ. ಬೆಲೆ ಬಾಳುವ 380 ಗಾಂ ತೂಕದ ಚಿನ್ನದ ಆಭರಣಗಳ ವಶಪಡಿಸಿಕೊಳ್ಳಲಾಗಿದೆ.

ಮೂರು ಜನ ಮಕ್ಕಳು 17 ವರ್ಷದವರಾಗಿದ್ದು, ಸ್ನೇಹಿತರಾಗಿದ್ದರು. ಮಕ್ಕಳಲ್ಲಿ ಒಬ್ಬ ಬಾಲಕಿಯು ಈ ಹಿಂದೆ ಅವರ ಮನೆಯವರಿಗೆ ಗೊತ್ತಾಗದಂತೆ ಅವರ ಅಜ್ಜಿಯ ಎಟಿಎಂ ಕಾರ್ಡ್‌ಅನ್ನು ತೆಗೆದುಕೊಂಡು ಹಣವನ್ನು ಡ್ರಾ ಮಾಡಿಕೊಂಡಿದ್ದಳು. ಈ ವಿಷಯದ ಬಗ್ಗೆ ಪದೇಪದೆ ಆ ಮಗುವನ್ನು ಬೈಯ್ಯುತ್ತಿದ್ದರಿಂದ ಅವರ ಸ್ನೇಹಿತರಾದ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರಿಗೆ ತಿಳಿಸಿದ್ದಳು. ಆಗ ಅವರು ನಿಮ್ಮ ಮನೆಯಲ್ಲಿ ದುಡ್ಡು ಹಾಗೂ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿ ಮಾರಾಟ ಮಾಡೋಣ ಆಗ ನಿಮ್ಮ ಮನೆಯವರಿಗೆ ಬುದ್ದಿ ಬರುತ್ತದೆ ಎಂದು ಮಾತನಾಡಿಕೊಂಡಿದ್ದರು. ಅದರಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಬುರ್ಕಾವನ್ನು ಹಾಕಿಸಿ, ಮನೆಯ ಬೀಗವನ್ನು ಇಟ್ಟಿದ್ದ ಸ್ಥಳವನ್ನು ಬಾಲಕಿಯೇ ತಿಳಿಸಿ ಮನೆಗೆ ಕಳುಹಿಸಿದ್ದಳು. ಬಾಲಕನು ಬಚ್ಚಿಟ್ಟಿದ್ದ ಮನೆಯ ಬೀಗದ ಸಹಾಯದಿಂದ ಮನೆಯ ಬಾಗಿಲನ್ನು ತೆಗೆದು ಬೀರುವಿನಲ್ಲಿದ್ದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿದ್ದ. ಅತ್ತ ಮನೆ ಮಾಲಿಕರು ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಕದ್ದ ಚಿನ್ನಾಭರಣ ಮಾರಾಟ ಮಾಡಲು ಟ್ಯೂಷನ್‌ ಮೇಡಂಗೆ ನೀಡಿದ್ದ ಮಕ್ಕಳು: ಪೊಲೀಸರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ 60 ಸಿಸಿ ಕ್ಯಾಮೆ ರಾಗಳನ್ನು ಪರಿಶೀಲಿಸಿದಾಗ ಚಿನ್ನ ಕದ್ದ ಬಾಲಕನ ಸುಳಿವು ಸಿಕ್ಕಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕದ್ದ ಚಿನ್ನಾಭರಣದ ಪೈಕಿ ಸ್ವಲ್ಪ ಚಿನ್ನದ ಒಡವೆಗಳನ್ನು ಈ ಹಿಂದೆ ಟ್ಯೂಷನ್‌ ಹೇಳುತ್ತಿದ್ದ ಮೇಡಂಗೆ ಕೊಟ್ಟು ನಮ್ಮ ತಂದೆ ಮದ್ಯ ವ್ಯಸನಿಯಾ ಗಿದ್ದು, ಕಾಲೇಜಿಗೆ ಫೀಸ್‌ ಕಟ್ಟಲು ಹಣ ಇಲ್ಲ. ಮಾರಾಟ ಮಾಡಿಸಿಕೊಡುವಂತೆ ನೀಡಿ ದ್ದ. ಇನ್ನು ಕೆಲವು ಚಿನ್ನದ ಆಭರಣಗಳನ್ನು ಮುಂದಿನ ದಿನಗಳಲ್ಲಿ ಮಾರಾಟ ಮಾಡುವ ಸಲುವಾಗಿ ಮನೆಯಲ್ಲಿ ಇಟ್ಟಿಕೊಂಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next