ಸುಸೈಡ್ ಡ್ರೋನ್ ಎಂದು ಕರೆಯಲ್ಪ ಡುವ ನಾಗಾಸ್ತ್ರ-1ರ ಮೊದಲ ಬ್ಯಾಚ್‌ನಲ್ಲಿ 120 ಡ್ರೋನ್‌ಗಳು ಹಸ್ತಾಂತರ ವಾಗಿದ್ದು, ಇನ್ನೂ 480 ಡ್ರೋನ್‌ಗಳನ್ನು ಸೇನೆ ಖರೀದಿಸಲಿದೆ. ಈ ಡ್ರೋನ್ ಸದ್ದಿಲ್ಲದೇ, ಕಣ್ಣಿಗೆ ಸ್ಪಷ್ಟವಾಗಿ ಕಾಣಿಸದೇ ಕಾರ್ಯಾಚರಿಸುವ ಕಾರಣ ಶತ್ರುಗಳ ಮನೆಗೇ ನುಗ್ಗಿ ದಾಳಿ ಮಾಡಬಲ್ಲದು. ಹಾಗಾಗಿ ಭವಿಷ್ಯದಲ್ಲಿ ಸರ್ಜಿಕಲ್ ದಾಳಿಗಳಿಗೆ ಯುದ್ಧ ವಿಮಾನಗಳ ಆವಶ್ಯಕತೆ ಬರುವುದಿಲ್ಲ ಎನ್ನಲಾಗಿದೆ.
Advertisement
ಇದನ್ನು ನಾಗಪುರದ ಸೋಲಾರ್ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದ್ದು, ಬೆಂಗ ಳೂರಿನ ಝೆಡ್-ಮೋಶನ್ ಅಟೋನ ಮಸ್ ಸಿಸ್ಟಮ್ಸ್ ಪ್ರೈ.ಲಿ.ನ ಸಹಭಾಗಿತ್ವದಲ್ಲಿ ಶೇ.75ರಷ್ಟು ದೇಶೀಯ ಬಿಡಿಭಾಗಗಳನ್ನೇ ಬಳಸಿ ವಿನ್ಯಾಸಗೊಳಿಸಲಾಗಿದೆ. 30ಕೆ.ಜಿ ತೂಕ ಹೊಂದಿದ್ದು, ಗ್ರೌಂಡ್ ಕಂಟ್ರೋಲ್ ಸ್ಟೇಷನ್, ಕಮ್ಯೂನಿಕೇಶನ್ ಕಂಟ್ರೋಲ್, ಪೇಲೋಡ್ ಮತ್ತು ನ್ಯುಮ್ಯಾಟಿಕ್ ಲಾಂಚರ್‌ಗಳನ್ನು 2 ಭಾಗವಾಗಿ ವಿಂಗಡಿ ಸಿ, ಬ್ಯಾಗ್‌ಗಳಲ್ಲಿ ಹೊತ್ತೂಯ್ಯಬಹುದಾ ಗಿದೆ. ಟ್ರೈಪಾಡ್ ಅಥವಾ ಕೈಯಿಂದಲೇ ಉಡಾವಣೆ ಮಾಡಬಹುದು.
1-4 ಕೆ.ಜಿ. ಸಿಡಿ ತಲೆ ಹೊತ್ತು ದಾಳಿ ಸಾಮರ್ಥ್ಯ
60 -90 ನಿಮಿಷ ಹಾರಾಟ
ಮಾನವರಿಂದಲೇ ಸುಲಭ ವಾಗಿ ಸಾಗಿಸಲು ಸಾಧ್ಯ
ಕೈ ಅಥವಾ ಟ್ರೈಪಾಡ್ ಮೂಲಕ ಉಡಾವಣೆ