Advertisement
ಬಹುತ್ವವಿರುವ ರಾಷ್ಟ್ರದಲ್ಲಿ ಹಿಂದೂ ಹೆಸರು ಹೇಳಿ ಕೊಂಡು ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಹಿಂದುತ್ವದಿಂದ ದೇಶದಲ್ಲಿ ಈಗ ಸಮಾಜ ವಿಭಜನೆ ಆಗುತ್ತಿದೆ. ಅಂಥವರಿಗೆ ಭಾರತರತ್ನ ಪ್ರಶಸ್ತಿ ಬೇಡ. ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ನೀಡಿ ಅಂತ ಹೇಳಿದ್ದೆ. ಅದು ತಪ್ಪಾ? ಸಾವಿತ್ರಿಬಾಯಿ ಪುಲೆ ಅವರಿಗೆ ನೀಡಿದ್ದಕ್ಕೆ ನಾನೇನು ವಿರೋಧ ಮಾಡಿದ್ದೇನಾ. ಇವ ರೇಕೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಕೊಂಡು ನೋಡ್ತಾರೆ? ಎಂದರು.
Related Articles
ಬಾಗಲಕೋಟೆ: ಮಲಪ್ರಭಾ ನದಿ ತುಂಬಿ ಹರಿಯುತ್ತಿರುವುದರಿಂದ ಬಾದಾಮಿ ಕ್ಷೇತ್ರದಲ್ಲಿ 3ನೇ ಬಾರಿ ಪ್ರವಾಹ ಉಂಟಾಗಿದ್ದು, ಮಂಗಳವಾರ ಸುರಿಯುತ್ತಿದ್ದ ಮಳೆಯಲ್ಲೇ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.
Advertisement
ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಮೂರು ಬಾರಿ ಪ್ರವಾಸದ ಮಾರ್ಗ ಬದಲಾಯಿಸಿದ್ದ ಸಿದ್ದರಾಮಯ್ಯ, ಕೊನೆಗೆ ಬೆಳಗಾವಿ ಮೂಲಕ ಕೆರೂರ, ಕುಳಗೇರಿ ಕ್ರಾಸ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದರು. ಮೊದಲು ಬೀರನೂರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಬೀರನೂರಕ್ಕೆ ಆಗಮಿಸುತ್ತಿದ್ದಂತೆ ಮಳೆಯೂ ಆರಂಭವಾಯಿತು. ಬೆಂಬಲಿಗರ ಸಹಾಯದೊಂದಿಗೆ ಕೊಡೆ ಹಿಡಿದು ಗ್ರಾಮದಲ್ಲಿ ಬಿದ್ದ ಮನೆಗಳನ್ನು ವೀಕ್ಷಿಸಿದರು.
ಬಿದ್ದ ಮನೆಗಳ ಸಮೀಕ್ಷೆಯಲ್ಲಿ ಲೋಪವಾಗಿದೆ. ತಾತ್ಕಾಲಿಕ ಪರಿಹಾರವೂ ನೈಜ ಸಂತ್ರಸ್ತರಿಗೆ ಸಿಕ್ಕಿಲ್ಲ ಎಂದು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮನೆಗಳ ಬಿದ್ದ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯ ಬಳಿಕವೂ ಹಲವು ಮನೆ ಬಿದ್ದಿವೆ. ಪುನಃ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು. ಶೇ.25ಕ್ಕಿಂತ ಕಡಿಮೆ ಬಿದ್ದರೆ 50 ಸಾವಿರ, ಶೇ.25ಕ್ಕೂ ಹೆಚ್ಚು ಮನೆ ಬಿದ್ದರೆ 5 ಲಕ್ಷ ಪರಿಹಾರ ಕೊಡುವುದಾಗಿ ಸರ್ಕಾರ ವಿಧಾನಸಭೆಯಲ್ಲೇ ಒಪ್ಪಿಕೊಂಡಿದೆ. ಆ ಪ್ರಕಾರವೇ ಪರಿಹಾರ ಕೊಡಬೇಕು ಎಂದು ಸೂಚಿಸಿದರು.
ಕರ್ಲಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದಂತೆ ಜೋರಾಗಿ ಮಳೆ ಆರಂಭವಾಯಿತು. ಆಗ ಮಳೆಯಿಂದ ರಕ್ಷಿಸಿಕೊಳ್ಳಲು ಗ್ರಾಮದ ಆಂಜನೆಯ ದೇವಸ್ಥಾನದೊಳಗೆ ತೆರಳಿದರು. ಮಳೆ ತೀವ್ರವಾಗುತ್ತಿದ್ದಂತೆ ಬೀರನೂರ ಮತ್ತು ಕರ್ಲಕೊಪ್ಪ ಗ್ರಾಮಗಳಿಗೆ ಮಾತ್ರ ಭೇಟಿ ನೀಡಿ ಬಾದಾಮಿಗೆ ತೆರಳಿದರು. ಬಳಿಕ ಬಾದಾಮಿ ತಾಪಂ ಸಭಾ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.