Advertisement

ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ

12:16 PM Nov 08, 2017 | |

ಭೇರ್ಯ: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ನ್ಯಾಯಯುತವಾಗಿ ಸಿಗಬೇಕಾದ ಅಧಿಕಾರ, ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಮಿರ್ಲೆ ಕ್ಷೇತ್ರದ ಜಿಪಂ ಸದಸ್ಯ ಸಾ.ರಾ.ನಂದೀಶ್‌ ಹೇಳಿದರು.

Advertisement

ಸಮೀಪದ ಮಾಳನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀಮಡಿವಾಳ ಮಾಚಿ ದೇವರ ಸಂಘವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದಿರುವ ಸಮಾಜವನ್ನು ಮೇಲೆತ್ತಲು ಮೊದಲು ಸರ್ಕಾರ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ಸ್ವಾತಂತ್ರ ಬಂದು 72 ವರ್ಷಗಳು ಕಳೆಯುತ್ತಿದ್ದರೂ ನಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದೆ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ ಎಂದರು. ಜಿಪಂ ಸದಸ್ಯ ಸಾ.ರಾ.ನಂದೀಶ್‌, ತಾಪಂ ಸದಸ್ಯೆಯರಾದ ಶೋಭಾಕೋಟೆಗೌಡ, ಲಲಿತಾನವೀನ್‌ ಅವರನ್ನು ಅಭಿನಂದಿಸಲಾಯಿತು.

ಮಿರ್ಲೆ ಗ್ರಾಪಂ ಅಧ್ಯಕ್ಷ ಎಂ.ಆರ್‌.ಮಹದೇವ್‌, ಸದಸ್ಯರಾದ ರತ್ನಮ್ಮ, ಸರಸ್ವತಿ, ರಾಜೇಶ್‌, ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಧರ್ಮರಾಜು, ಖಜಾಂಚಿ ದೊಡ್ಡಕೊಪ್ಪಲು ಶಿವಣ್ಣ, ಸಂಘದ ಅಧ್ಯಕ್ಷ ಸಂದೀಪ್‌, ಗೌರವ ಅಧ್ಯಕ್ಷ ಮಹದೇವ್‌, ಬಾಲುಶೆಟ್ಟಿ, ಹರೀಶ್‌ಶೆಟ್ಟಿ, ಶೇಖರ್‌, ನಾಗೇಶ್‌, ದಿನೇಶ್‌, ಮಹೇಶ್‌, ಮಂಜುಶೆಟ್ಟಿ, ಪ್ರಕಾಶ್‌ಶೆಟ್ಟಿ, ಲೋಕೇಶ್‌ಶೆಟ್ಟಿ, ಟಿ.ಮಂಜುಶೆಟ್ಟಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next