Advertisement
ಈಗಾಗಲೇ ಪ್ರಕಟಿತ ರಾಜ್ಯ ಪತ್ರದಲ್ಲಿ ಘೋಷಿತ ತಾಲೂಕಿಗೆ ಕೇವಲ 12 ಗ್ರಾಮಗಳನ್ನು ಮಾತ್ರ ಸೇರ್ಪಡೆಗೊಳಿಸಿದೆ.ಈ ಹಿಂದೆ ಶಹಾಬಾದ ಹೋಬಳಿ ವ್ಯಾಪ್ತಿಗೆ ಸುಮಾರು 20 ಹಳ್ಳಿಗಳು ಬರುತ್ತಿದ್ದವು. ಆದರೀಗ 12 ಹಳ್ಳಿಗಳನ್ನು ಸೇರಿಸಿ
ಅವೈಜ್ಞಾನಿಕವಾಗಿ ಮಾಡಿದ್ದಾರೆ. ತಾಲೂಕು ಕೇಂದ್ರದಿಂದ ಮುಗುಳನಾಗಾವ, ಶಂಕರವಾಡಿ, ಮಾಲಗತ್ತಿ, ಇಂಗಳಗಿ, ಕುಂದನೂರ, ಕಡಬೂರ, ಚಾಮನೂರ, ಬಳವಡಗಿ, ವಾಡಿ ಪಟ್ಟಣಗಳು ಕೇವಲ 8 ಕಿಮೀ ದೂರದಲ್ಲಿವೆ. ಆದರೆ
ಈ ಗ್ರಾಮಗಳು ಚಿತ್ತಾಪುರ ತಾಲೂಕಿನಿಂದ ಸುಮಾರು 25 ಕಿಮೀ ದೂರದಲ್ಲಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಕ್ಕೆ ಸಂಬಂಧಿಸಿದಂತೆ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳು ಈ ಕಚೇರಿಯ ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಶೇಡೂಲ್1-2ರಲ್ಲಿ ಶಹಾಬಾದ ಹೋಬಳಿ ಹಾಗೂ ಇತರ ಕಾರ್ಯಾಲಯಗಳ ವ್ಯಾಪ್ತಿಗೆ ಬರುವ ಹಳ್ಳಿಗಳನ್ನು ತಾಲೂಕಿನ ವ್ಯಾಪ್ತಿಗೆ ಸೇರಿಸಿದಲ್ಲಿ ಭೌಗೋಳಿಕವಾಗಿ, ವೈಜ್ಞಾನಿಕವಾಗಿ ತಾಲೂಕು ರಚನೆ ಮಾಡಿದಂತಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಶಹಾಬಾದ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಮಹ್ಮದ್ ಅಲಿ ಜಮಾದಾರ, ಕಾರ್ಯದರ್ಶಿ ಕೃಷ್ಣಪ್ಪ ಕರಣಿಕ್, ಲೋಹಿತ್ ಕಟ್ಟಿ,ಶರಣು ವಸ್ತ್ರದ್, ರಾಜಮಹ್ಮದ್ ರಾಜಾ, ನಿಂಗಣ್ಣ ಹುಳಗೋಳಕರ್, ರಾಚಣ್ಣ ಅಲ್ಲಂಶೆಟ್ಟಿ, ರಮೇಶ ಭಟ್, ಜಾಫರ್ ಪಟೇಲ್, ಗಫೂರ್ ಪಟೇಲ್, ಶಿವಕುಮಾರ ಅವರಾದಿ ಇತರರು ಇದ್ದರು.