ಪಡುಬಿದ್ರಿ: ಅದಾನಿ ಯುಪಿಸಿಎಲ್ ತನ್ನ ಸಿಎಸ್‌ಆರ್ ನಿಧಿಯ ಜೋಡಣೆಯೊಂದಿಗೆ ಒಟ್ಟು 48.39 ಲಕ್ಷ ರೂ. ವೆಚ್ಚಿದಲ್ಲಿ ನಡೆಸಲಾಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅದಾನಿ ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಇವುಗಳಲ್ಲಿ 21.48ಲಕ್ಷ ರೂ. ವೆಚ್ಚ ದಲ್ಲಿ ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ ಮುದರಂಗಡಿ ರಸ್ತೆ ಯಿಂದ ವೀರಭದ್ರ ಗುಡಿ – ಮಾಣಿ ಯೂರು ಕರೆಯ ತನಕದ 250 ಮೀಟರ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಮತ್ತು 26.91 ಲಕ್ಷ ರೂ. ವೆಚ್ಚ ದಲ್ಲಿ ಕೇಂಜ – ಮಾಣಿಯೂರು ರಸ್ತೆಯ 800 ಮೀಟರ್ ಗಳಲ್ಲಿ 650 ಮೀಟರ್ ಡಾಮರೀ ಕರಣ ಮತ್ತು 150 ಕಾಂಕ್ರೀಟಿಕರಣದ ಅಭಿವೃದ್ಧಿ ಕಾಮಗಾರಿ ಗಳೂ ಒಳಗೊಂಡಿರುತ್ತವೆ.
ಈ ಸಂದರ್ಭ ಅದಾನಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಯುಪಿಸಿಎಲ್ ಆವರಣದೊಳಗೇ ಸ್ಥಾಪಿತವಾಗಲಿರುವ ಅದಾನಿ ಸಿಮೆಂಟ್ ಕಂಪೆನಿಯಲ್ಲಿ ಎಲ್ಲೂರು ಹಾಗೂ ಮುದರಂಗಡಿ ಗ್ರಾಮಗಳ ವ್ಯಾಪ್ತಿಯ ಸುಮಾರು 150 ಯುವಕ ರಿಗೆ ನೇರ ಉದ್ಯೋಗಾವಕಾಶವನ್ನು ಕಲ್ಪಿಸಲಾಗುತ್ತದೆ. ಮಂಗಳೂರು ಕೈಗಾರಿಕಾ ಪ್ರದೇಶದ ಉದ್ದಿಮೆಗಳು, ಮಂಗಳೂರು ಮಹಾನಗರ ಪಾಲಿಕೆ, ಕಾಪು ಕ್ಷೇತ್ರವನ್ನು ಗುರಿಯಾಗಿಸಿ ಕೊಂಡು ಸಮುದ್ರದ ನೀರನ್ನು “ಡಿ ಸಾಲಿನೈಶೇಷನ್ ಪ್ಲಾಂಟ್’ ಮೂಲಕ ಶುದ್ಧೀಕರಿಸಿ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಯೋಜನೆ ಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು ಸುಮಾರು 2 ಲಕ್ಷ ಜನತೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಮಾಡಲಾಗುವುದು ಎಂದರು.
ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಮಧ್ವರಾಜ್, ಪಿಡಿಒ ಚಂದ್ರಶೇಖರ ಸಾಲ್ಯಾನ್, ಸದಸ್ಯರಾದ ಸದಾಶಿವ ಶೆಟ್ಟಿ, ವಿಮಲಾ ದೇವಾಡಿಗ, ಮೋಹನ ಆಚಾರ್ಯ, ಅದಾನಿ ಯುಪಿಸಿಎಲ್ ಎಜಿಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ, ಅದಾನಿ ಫೌಂಡೇಶನ್‌ನ ಸುಖೇಶ್, ಅನುದೀಪ್ ಉಪಸ್ಥಿತ ರಿದ್ದರು. ಈ ಸಂದರ್ಭದ ಧಾರ್ಮಿಕ ವಿಧಿಗಳನ್ನು ಗುರುರಾಜ ಭಟ್ ಹಾಗೂ ಸತ್ಯನಾರಾಯಣ ಭಟ್ ನೆರವೇರಿಸಿದರು.