Advertisement

Adani: ಗಣನೀಯ ಏರಿಕೆ ಕಂಡ ಷೇರು- ಮರಳಿ ಅಗ್ರ 20 ಶ್ರೀಮಂತರ ಪಟ್ಟಿಗೆ ಗೌತಮ್‌ ಅದಾನಿ

08:04 PM Nov 29, 2023 | Team Udayavani |

ನವದೆಹಲಿ: ಅದಾನಿ ಗ್ರೂಪ್ಸ್‌ನ ಸಂಸ್ಥೆಗಳ ಷೇರು ಗಣನೀಯವಾಗಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಉದ್ಯಮಿ ಗೌತಮ್‌ ಅದಾನಿಯವರ ಸಂಪತ್ತು ಏರಿಕಯಾಗಿದೆ. ಈ ಮೂಲಕ ವಿಶ್ವದ ಅಗ್ರ 20 ಶ್ರೀಮಂತರ ಪಟ್ಟಿಗೆ ಗೌತಮ್‌ ಮರುಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಷೇರು ವಹಿವಾಟಿನಲ್ಲಿ ಅದಾನಿ ಗ್ರೂಪ್‌ನ ಎಲ್ಲಾ 10 ಸಂಸ್ಥೆಗಳ ಷೇರು ಮೌಲ್ಯವೂ ಏರಿಕೆಯಾಗಿದ್ದು, ಒಟ್ಟು ಅದಾನಿ ಗ್ರೂಪ್ಸ್‌ನ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ರೂ.ನಷ್ಟು ಏರಿಕೆಯಾಗಿದೆ.

Advertisement

ಈ ಮೂಲಕ ಗೌತಮ್‌ ಅದಾನಿ ಅವರ ವೈಯಕ್ತಿಕ ಆಸ್ತಿಯ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ 6.5 ಶತಕೋಟಿ ಡಾಲರ್‌ಗಳಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಗೌತಮ್‌ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 19ನೇ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next