Advertisement

ಒಡಿಶಾದಲ್ಲಿ ಅದಾನಿ ಗ್ರೂಪ್‌ನಿಂದ 75 ಸಾವಿರ ಕೋಟಿ ರೂ. ಹೂಡಿಕೆ

10:29 PM Aug 12, 2022 | Team Udayavani |

ಭುವನೇಶ್ವರ: ಉದ್ಯಮಿ ಗೌತಮ್‌ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ಸ್‌ ಸಂಸ್ಥೆಯು ಒಡಿಶಾದಲ್ಲಿ 57,000 ಕೋಟಿ ರೂ. ಹೂಡಿಕೆ ಮಾಡುವುದಕ್ಕೆ ಸಿದ್ಧವಾಗಿದೆ.

Advertisement

40 ಲಕ್ಷ ಟನ್‌ ಸಾಮರ್ಥ್ಯವಿರುವ ಅಲ್ಯೂಮಿನಿಯಂ ಸಂಸ್ಕರಣಾಗಾರ ಮತ್ತು 3 ಕೋಟಿ ಟನ್‌ ಕಬ್ಬಿಣದ ಅದಿರಿನ ಯೋಜನೆಯನ್ನು ಸಂಸ್ಥೆ ಪ್ರಸ್ತಾವಿಸಿದ್ದು, ಅದಕ್ಕೆ ನವೀನ್‌ ಪಾಟ್ನಾಯಕ್‌ ಅವರ ಸರ್ಕಾರ ಒಪ್ಪಿಗೆ ನೀಡಿದೆ.

ಕಬ್ಬಿಣದ ಅದಿರು ಶುದ್ಧೀಕರಣ ಘಟಕವನ್ನು ಕಿಯೋಂಜಾರ್‌ ಜಿಲ್ಲೆಯ ದಿಯೋಜಾರ್‌ನಲ್ಲಿ ಸ್ಥಾಪಿಸಲಾಗುವುದು. ಹಾಗೆಯೇ ಅದರ ಪೆಲೆಟ್‌ ಪ್ಲಾಂಟ್‌ ಅನ್ನು ಭದ್ರಾಕ್‌ ಜಿಲ್ಲೆಯ ಧಾಮ್ರಾದಲ್ಲಿ ಸ್ಥಾಪಿಸಲಾಗುವುದು.

ಈ ಯೋಜನೆಗಳಿಂದಾಗಿ 9,300 ನೇರ ಉದ್ಯೋಗ ಹಾಗೂ 10 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next