ನವ ದೆಹಲಿ : ಫೆಬ್ರವರಿ 1 ರ ದಂಗೆಯ ನಂತರ, ಮ್ಯಾನ್ಮಾರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಕಂಪನಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಮತ್ತು ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕವಾಗಿ ದಬ್ಬಾಳಿಕೆ ನಡೆಸುತ್ತಿದ್ದಂತೆ, ಭಾರತ ಮೂಲದ ಅದಾನಿ ಗ್ರೂಪ್ ಮಿಲಿಟರಿ ಸಂಘಟಿತ ಮ್ಯಾನ್ಮಾರ್ ಎಕನಾಮಿಕ್ ಕಾರ್ಪೊರೇಶನ್ ನೊಂದಿಗಿನ ಗುತ್ತಿಗೆ ಒಪ್ಪಂದದ ಮೂಲಕ ಮುಖ್ಯ ನಗರ ಯಾಂಗೊನ್ ನಲ್ಲಿ ಬಂದರು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಯಾಂಗೊನ್ ರೀಜನ್ ಇನ್ವೆಸ್ಟ್ ಮೆಂಟ್ ಕಮಿಷನ್ ನಿಂದ ಬಹಿರಂಗಗೊಂಡ ದಾಖಲೆಗಳ ಪ್ರಕಾರ, ಅದಾನಿ ಗ್ರೂಪ್ ಮ್ಯಾನ್ಮಾರ್ ಎಕನಾಮಿಕ್ ಕಾರ್ಪೊರೇಶನ್ ಗೆ “ಭೂ ಗುತ್ತಿಗೆ ಶುಲ್ಕ/land Lease fees” ದಲ್ಲಿ 30 ಮಿಲಿಯನ್ ಡಾಲರ್ ಪಾವತಿಸುತ್ತಿದೆ ಎಂದು ಎಬಿಸಿ ನ್ಯೂಸ್ ತಿಳಿಸಿದೆ.
ಓದಿ : ಬಿಜೆಪಿ ನಾಯಕನಿಗೆ ಕರೆ ಮಾಡಿದ ಮಮತಾ ಆಡಿಯೋ ವೈರಲ್ ..!
ಇನ್ನು, ಮಿಲಿಟರಿ ನಾಯತ್ವದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅದಾನಿ ಗ್ರೂಪ್, ಮಿಲಿಟರಿ ನಾಯಕತ್ವದೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿದ್ದೇವೆ ಎಂಬ ವಿಚಾರಗಳನ್ನು ನಿರಾಕರಿಸುತ್ತೇವೆ” ಎಂದು ಹೇಳಿಕೆ ನೀಡಿದೆ.
ಹೇಗಾದರೂ, ಎಬಿಸಿಗೆ ಲಭ್ಯವಾದ ವೀಡಿಯೊಗಳು ಮತ್ತು ಫೋಟೋಗಳು ಅದಾನಿ ಗ್ರೂಪ್ ನ ಬಂದರುಗಳ ಅಭಿವೃದ್ಧಿ ಕಾರ್ಯದ ಮುಖ್ಯ ಕಾರ್ಯನಿರ್ವಾಹಕ ಕರಣ್ ಅದಾನಿ ಅವರು ಜುಲೈ 2019 ರಲ್ಲಿ ಚುನಾಯಿತ ಸರ್ಕಾರದ ವಿರುದ್ಧ ದಂಗೆಯನ್ನು ಮುನ್ನಡೆಸಿದ್ದ ಸೇನಾ ಮುಖ್ಯಸ್ಥ ಹಿರಿಯ ಜನರಲ್ ಮಿನ್ ಆಂಗ್ ಹ್ಲೇಂಗ್ ಅವರನ್ನು ಭೇಟಿಯಾಗಿದ್ದರು ಎಂದು ಬಹಿರಂಗಪಡಿಸುತ್ತದೆ.
2017 ರಲ್ಲಿ ನಿರಾಶ್ರಿತರ ಬಿಕ್ಕಟ್ಟನ್ನು ಹುಟ್ಟುಹಾಕಿದ ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಹಾಗೂ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಹ್ಲೇಂಗ್ ಸೇರಿದಂತೆ ಕೆಲವು ಜನರಲ್ ಗಳು ಯುನೈಟೆಡ್ ಸ್ಟೇಟ್ಸ್ ಮಾನವ ಹಕ್ಕುಗಳ ನಿರ್ಬಂಧದಲ್ಲಿದ್ದರು ಎನ್ನುವುದು ವರದಿ ತಿಳಿಸಿದೆ.
ಓದಿ : ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಡಾ.ಸುಧಾಕರ್ ಭೇಟಿ : ವ್ಯವಸ್ಥೆ ಕುರಿತು ಮೆಚ್ಚುಗೆ