Advertisement

T-20: ಆ್ಯಡಂ ಮಿಲ್ನೆ, ಟಿಮ್‌ ಸೀಫ‌ರ್ಟ್‌ ಸಾಹಸ, ನ್ಯೂಜಿಲ್ಯಾಂಡ್‌ಗೆ ಭರ್ಜರಿ ಜಯ

09:22 PM Apr 05, 2023 | Team Udayavani |

ಡ್ಯುನೆಡಿನ್‌: ಪ್ರವಾಸಿ ಶ್ರೀಲಂಕಾ ಎದುರಿನ ದ್ವಿತೀಯ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಸಮಬಲಕ್ಕೆ ತಂದಿದೆ.

Advertisement

ಬುಧವಾರ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 19 ಓವರ್‌ಗಳಲ್ಲಿ 141ಕ್ಕೆ ಆಲೌಟ್‌ ಆಯಿತು. ಜವಾಬಿತ್ತ ನ್ಯೂಜಿಲ್ಯಾಂಡ್‌ 14.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 146 ರನ್‌ ಬಾರಿಸಿತು. ಮೊದಲ ಪಂದ್ಯ ಟೈ ಆಗಿತ್ತು. ಬಳಿಕ ಸೂಪರ್‌ ಓವರ್‌ನಲ್ಲಿ ಲಂಕಾ ಗೆದ್ದು ಬಂದಿತ್ತು. ನಿರ್ಣಾಯಕ ಪಂದ್ಯ ಶನಿವಾರ ಕ್ವೀನ್ಸ್‌ಟೌನ್‌ನಲ್ಲಿ ನಡೆಯಲಿದೆ.

ಬೌಲಿಂಗ್‌ನಲ್ಲಿ ಮಿಂಚಿದ ಆ್ಯಡಂ ಮಿಲೆ° 5 ವಿಕೆಟ್‌ ಕೆಡವಿದರೆ, ಚೇಸಿಂಗ್‌ ವೇಳೆ ಟಿಮ್‌ ಸೀಫ‌ರ್ಟ್‌ ಅಜೇಯ 79 ರನ್‌ ಹೊಡೆದರು.
ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-19 ಓವರ್‌ಗಳಲ್ಲಿ 141 (ಧನಂಜಯ 37, ಕುಸಲ್‌ ಪೆರೆರ 35, ಅಸಲಂಕ 24, ಮಿಲ್ನೆ 26ಕ್ಕೆ 5, ಲಿಸ್ಟರ್‌ 26ಕ್ಕೆ 2). ನ್ಯೂಜಿಲ್ಯಾಂಡ್‌-14.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 146 (ಸೀಫ‌ರ್ಟ್‌ ಔಟಾಗದೆ 79, ಬೌಸ್‌ 31, ಲ್ಯಾಥಂ ಔಟಾಗದೆ 20). ಪಂದ್ಯಶ್ರೇಷ್ಠ: ಆ್ಯಡಂ ಮಿಲೆ°.

Advertisement

Udayavani is now on Telegram. Click here to join our channel and stay updated with the latest news.

Next