Advertisement

ಜಿಲ್ಲೆಯಲ್ಲಿ 5ರಿಂದ ಅದಾಲತ್‌

01:48 PM Oct 02, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ 06 ತಾಲೂಕುಗಳಲ್ಲಿ ಅಕ್ಟೋಬರ್‌ 5 ರಿಂದ 7ವರೆಗೆ ರಾಜ್ಯ ಆಹಾರ ಆಯೋಗದಿಂದ ಅದಾಲತ್‌ ನಡೆಸಲಾಗುತ್ತಿದ್ದು, ನಾಗರಿಕರು ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್‌ .ವಿ.ಶಿವಶಂಕರ್‌ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಆಯೋಗ ರಾಷ್ಟ್ರೀಯ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ಬರುವ ಆಹಾರ ಇಲಾಖೆ, ಅಂಗನವಾಡಿಗಳು, ಆಹಾರ ಗೋದಾಮುಗಳು, ಆಸ್ಪತ್ರೆಗಳಿಗೆ ಮಾತ್ರ ಭೇಟಿ ನೀಡಲಾಗುತ್ತಿತ್ತು. ಆದರೆ ಪ್ರಥಮ ಬಾರಿಗೆ ರಾಜ್ಯಾದ್ಯಂತ ಅದಾಲತ್‌ ನಡೆಸಲು ತೀರ್ಮಾನಿಸಿ, ಮೊದಲು ಚಿಕಬಳ್ಳಾಪುರಜಿಲ್ಲೆಯಿಂದ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.

ಪಿಂಚಣಿ, ಕೃಷಿ, ನೀರಾವರಿ: ಅದಾಲತ್‌ ನಡೆಸಲು ಆಹಾರ ನಾಗರಿಕ ಸರಬರಾಜು ಇಲಾಖೆ, ಸಾಮಾಜಿಕಬದ್ರತಾ ಮತ್ತು ಪಿಂಚಣಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಅದಾಲತ್‌ ನಡೆಸಲು ಆಯೋಗ ತೀರ್ಮಾನಿಸಲಾಗಿದೆ. ಭದ್ರತಾ ಕಾಯ್ದೆ ಶೆಡ್ಯೂಲ್‌ 3 ರಲ್ಲಿ ಬರುವ ಪಿಂಚಣಿ, ಕೃಷಿ, ನೀರಾವರಿಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದರು. 5,469 ಫಲಾನುಭವಿಗಳು: ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಒಟ್ಟು 12 ಯೋಜನೆಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5,469 ಫಲಾನುಭವಿಗಳಿದ್ದಾರೆ ಹಾಗೂ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ನಿರ್ದೇಶನಾಲಯದಲ್ಲಿ 2,129 ಅರ್ಜಿಗಳು ಬಾಕಿ ಇವೆ ಮತ್ತು ವಿಲಕಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯಲ್ಲಿ 816 ಜನ ಫಲಾನುಭವಿಗಳಿದ್ದಾರೆ. ಅದಾಲತ್‌ ಕಾರ್ಯಕ್ರಮ ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ಸಮಾಜದ ಕಟ್ಟಕಡೆಯವ್ಯಕ್ತಿಗೂ ತಲುಪಿ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಹಾರ ಆಯೋಗದ ಸದಸ್ಯರಾದ ಬಿ.ಎ ಮಹಮ್ಮದ್‌ ಅಲಿ, ಮಂಜುಳಾ ಆರ್‌ ಸಾತನೂರ್‌, ಜಿಲ್ಲಾ—ಕಾರಿ ಆರ್‌ ಲತಾ, ಜಿಲ್ಲಾ ಪಂಚಾಯತ್‌ ಸಿಇಒ ಪಿ. ಶಿವಶಂಕರ್‌, ಅಪರ ಜಿಲ್ಲಾ—ಕಾರಿ ಎಚ್‌ ಅಮರೇಶ್‌, ಆಹಾರ, ನಾಗರಿಕ ಸರಬರಾಜ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸವಿತಾ, ಮಹಿಳಾ ಮತ್ತು

ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾ—ಕಾರಿಗಳಾದ ಜ್ಯೋತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

 

ಅದಾಲತ್‌ ವಿವರ :  ಅಕ್ಟೋಬರ್‌5 ರಂದು ಗೌರಿಬಿದನೂರು ತಾಲೂಕಿನ ತಾಪಂ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ12 ಗಂಟೆಯವರೆಗೆ, ಮಧ್ಯಾಹ್ನ2ರಿಂದ 4 ಗಂಟೆಯವರೆಗೆ ಗುಡಿಬಂಡೆ  ತಾಲೂಕಿನ ತಾಲೂಕುಕಚೇರಿ ಸಭಾಂಗಣದಲ್ಲಿ,6 ರಂದು ಬಾಗೇಪಲ್ಲಿ ತಾ. ತಾಪಂ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ12 ಗಂಟೆ, ಮಧ್ಯಾಹ್ನ2ರಿಂದ4 ಗಂಟೆಯವರೆಗೆ ಚಿಕ್ಕಬಳ್ಳಾಪುರ ನಗರದ

ಡಾ ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ, ಅ.7 ರಂದು ಶಿಡÛಘಟ್ಟ ತಾಲೂಕಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ12 ಗಂಟೆಯವರೆಗೆ, ಮಧ್ಯಾಹ್ನ2ರಿಂದ4 ಗಂಟೆಯವರೆಗೆ ಚಿಂತಾಮಣಿ ತಾಲೂಕಿನ ತಾಪಂ ಸಭಾಂಗಣದಲ್ಲಿ ಅದಾಲತ್‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್‌.ವಿ.ಶಿವಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next