Advertisement
ತಾಲೂಕಿನ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಆಳಂಗಾ, ಹೊದಲೂರ, ಅಣೂರ, ತುಗಾಂವ, ನರೋಣಾ ವ್ಯಾಪ್ತಿಯ ವಳವಂಡವಾಡಿ, ಥಳಿ, ಖಸಗಿ ಇನ್ನಿತರ ಹಳ್ಳಿಗಳಲ್ಲಿ ಸ್ವತಃ ಗ್ರಾಮಸ್ಥರೇ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಜ್ಜಾಗಿದ್ದಾರೆ. ಗ್ರಾಮಕ್ಕೆ ಬರುವ ಎಲ್ಲ ರಸ್ತೆಗಳಿಗೂ ಬೇಲಿ ಹಾಕಿರುವ ಗ್ರಾಮಸ್ಥರು ಗ್ರಾಮಕ್ಕೆ ಬೇರೆಯವರ ಪ್ರವೇಶ ನಿರ್ಬಂಧಿಸಿ, ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಹೊರಗಿನಿಂದ ಬರುವ ವಾಹನಗಳನ್ನು ದೂರದಿಂದಲೇ ತಡೆದು ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಮನೆಯಿಂದ ಯಾರು ಸಹ ಹೊರಗಡೆ ಬಾರದಂತೆ ಎಚ್ಚರ ವಹಿಸಿದ್ದಾರೆ.
Advertisement
ಹಳ್ಳಿಗಳಲ್ಲಿ ಸ್ವಯಂ ಕ್ವಾರಂಟೈನ್
05:42 PM Apr 13, 2020 | Naveen |
Advertisement
Udayavani is now on Telegram. Click here to join our channel and stay updated with the latest news.