ಗೋಕಾಕ್: ಮೈತ್ರಿ ಸರಕಾರ ಪತನ ಮಾಡಿ, ಬಿಜೆಪಿ ಸರಕಾರ ರಚನೆ ಮಾಡಲು ತ್ಯಾಗ ಮಾಡಿದ ಶಾಸಕರನ್ನು ರಾಜ್ಯ ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ. ಜಾರಕಿಹೊಳಿ ಹಾಗೂ ವಿಶ್ವನಾಥನನ್ನು ಯಾರೂ ತುಳಿಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನೇಹಿತ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ:ಸಿದ್ದರಾಮಯ್ಯ ಹೇಳಿಕೆ ತಿರುಚಿ, ಮಠಾಧೀಶರಿಗೆ ಬಿಜೆಪಿಯಿಂದಲೇ ಅವಮಾನ : ಆಂಜನೇಯ ಆರೋಪ
ನನಗೆ ಮತ್ತು ರಮೇಶ ಜಾರಕಿಹೊಳಿ ಸೇರಿ ಇನ್ನೂ ಕೆಲವು ಸ್ನೇಹಿತ ಶಾಸಕರಿಗೆ ಸಚಿವ ಸ್ಥಾನ ತಪ್ಪಿಸಲು ರಾಜ್ಯ ಬಿಜೆಪಿ ನಾಯಕರೇ ಷಡ್ಯಂತ್ರ ರೂಪಿಸಿದ್ದರು. ಅಧಿ ಕಾರ ನೀಡಿದ ನಮ್ಮನ್ನು ಹಿಂದುಳಿದ ವರ್ಗದವರೆಂದು ತುಳಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ವಿರುದ್ಧ ಗುಡುಗಿದರು.