Advertisement

ಗಣಪತಿಗೆ ಅವಮಾನ: ಹಿಂದೂಗಳ ಕ್ಷಮೆ ಕೋರಿದ ರಿಪಬ್ಲಿಕ್‌ ಪಕ್ಷ 

12:15 PM Sep 21, 2018 | |

ಹೂಸ್ಟನ್‌: ಹಿಂದೂಗಳ ದೇವರಾದ ಗಣೇಶನನ್ನು ತನ್ನ ಜಾಹೀರಾತಿನಲ್ಲಿ ವ್ಯಂಗ್ಯವಾಗಿ ಬಳಸಿಕೊಂಡಿದ್ದಕ್ಕಾಗಿ ಅಮೆರಿಕದ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷ ಹಿಂದೂಗಳ ಕ್ಷಮೆ ಕೋರಿದೆ. 

Advertisement

ಇತ್ತೀಚೆಗೆ ಜರುಗಿದ ಗಣೇಶ ಚತುರ್ಥಿಯ ದಿನ ಪತ್ರಿಕೆಗಳಲ್ಲಿ ನೀಡಲಾಗಿದ್ದ ಜಾಹೀರಾತಿನಲ್ಲಿ ಕತ್ತೆಯ ಮೇಲೆ ಕೂತಿದ್ದ ಗಣೇಶನ ಕಾಲ್ಪನಿಕ ಚಿತ್ರ ಪ್ರಕಟಿಸಲಾಗಿತ್ತು.

ರಿಪಬ್ಲಿಕನ್‌ ಪಕ್ಷದ ಗುರುತು ಆನೆ ಆಗಿದ್ದು, ವಿಪಕ್ಷ ಡೆಮಾಕ್ರಾಟ್‌ನ ಗುರುತು ಕತ್ತೆ ಆಗಿರುವ ಹಿನ್ನೆಲೆಯಲ್ಲಿ, ಈ ಚಿತ್ರದ ಕೆಳಗಿನ ಅಡಿಬರಹದಲ್ಲಿ “ಮತದಾರರೇ ನಿಮಗೆ ಕತ್ತೆ ಬೇಕೋ, ಆನೆ ಬೇಕೋ? ನೀವೇ ಆರಿಸಿರಿ’ ಎಂದು ಲೇವಡಿ ಮಾಡಲಾಗಿತ್ತು. ಹಾಗಾಗಿ, ಇದು ವಿವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next