Advertisement

ವೇದಿಕಾ ಗ್ಲಾಮರಸ್‌ ಫೋಟೋ ವೈರಲ್‌

11:06 AM Dec 02, 2020 | Suhan S |

ಕೋವಿಡ್ ಲಾಕ್‌ಡೌನ್‌ ಮುಗಿಯುತ್ತಿದ್ದಂತೆ, ಒಬ್ಬೊಬ್ಬರಾಗಿ  ನಟಿಮಣಿಯರು ವಿದೇಶದ ಸುಂದರ ತಾಣಗಳತ್ತ ಮುಖ ಮಾಡಿ ರಿಲ್ಯಾಕ್ಸ್‌ ಮೂಡ್‌ಗೆ ಜಾರುತ್ತಿದ್ದಾರೆ. ಇತ್ತೀಚೆಗಷ್ಟೇ ಕನ್ನಡದ ನಟಿಯರಾದ ಶಾನ್ವಿ ಶ್ರೀವಾಸ್ತವ್‌, ಪ್ರಣೀತಾ ಸುಭಾಷ್‌ ಸೇರಿದಂತೆ ಅನೇಕ ನಟಿಯರು ಮಾಲ್ಡೀವ್ಸ್‌ಗೆ ತೆರಳಿ ಕೆಲ ಸಮಯಕಳೆದಿದ್ದರು. ಇದೀಗ ದಕ್ಷಿಣ ಭಾರತದ ಮತ್ತೂಬ್ಬ ನಟಿ ವೇದಿಕಾ ಕೂಡ ಮಾಲ್ಡೀವ್ಸ್‌ಗೆ ಹಾರಿದ್ದಾರೆ.

Advertisement

ಇದನ್ನೂ ಓದಿ : ಚಿತ್ರೀಕರಣದತ್ತ ಉಪ್ಪಿ ಕಬ್ಜ

ಮಾಲ್ಡೀವ್ಸ್‌ನ ಕಡಲ ಕಿನಾರೆಯ ಸುಂದರ ಪರಿಸರದಲ್ಲಿ ಕಾಲ ಕಳೆಯುತ್ತಿರುವ ವೇದಿಕಾ, ತಮ್ಮ ಒಂದಷ್ಟು ಹಾಟ್‌ ಎನಿಸುವಂಥ ಫೋಟೋಗಳನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದ್ದು, ವೇದಿಕಾ ಹಾಟ್‌ ಲುಕ್‌ ಸಿನಿಪ್ರಿಯರು ಫಿದಾ ಆಗಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಸಂಗಮ’ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ವೇದಿಕಾ, ನಂತರ “ಗೌಡ್ರು ಹೋಟೆಲ್‌’, “ಶಿವಲಿಂಗ’ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ವೇದಿಕಾ ರಿಯಲ್‌ ಸ್ಟಾರ್‌ ಉಪೇಂದ್ರ ಅವರೊಂದಿಗೆ “ಹೋಮ್‌ ಮಿನಿಸ್ಟರ್‌’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ­

Advertisement
Advertisement

Udayavani is now on Telegram. Click here to join our channel and stay updated with the latest news.

Next