Advertisement

ಬಡ್ಡೀಸ್‌ಗೆ ಸಿರಿ ನಾಯಕಿ : ಶಿಕಾರಿ ಹುಡುಗಿಯ ಸಿನಿಶಿಕಾರಿ

01:23 PM Jan 12, 2021 | Team Udayavani |

“ಕಿನ್ನರಿ’, “ಕನ್ನಡತಿ’ ಮೊದಲಾದ ಧಾರವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ಕಿರಣ್‌ ರಾಜ್‌
“ಬಡ್ಡೀಸ್‌’ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಯವಾಗುತ್ತಿರೋದು ನಿಮಗೆ ಗೊತ್ತೇ ಇದೆ.

Advertisement

ಇತ್ತೀಚೆಗಷ್ಟೇ ಈ ಚಿತ್ರದ ಟೈಟಲ್‌ ಅನ್ನು ಸಿನಿಮಾ ಪಿಆರ್‌ ಓಗಳು ಸೇರಿ ಬಿಡುಗಡೆ ಮಾಡಿದ್ದರು. ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಆಕೆ ಸಿರಿ ಪ್ರಹ್ಲಾದ್‌. ಈ ಹಿಂದೆ “ಒಂದು ಶಿಕಾರಿಯ ಕಥೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ, ಸಿರಿ ಈಗ “ಬಡ್ಡೀಸ್‌’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಈ ಹಿಂದೆ ತುಳು ಚಿತ್ರವೊಂದನ್ನು ನಿರ್ಮಿಸಿದ್ದ ರಾಮಕೃಷ್ಣ ಶೆಟ್ಟಿ ಹಾಗೂ ಭಾರತಿ ಶೆಟ್ಟಿ “ತವಿಶ್‌ ಎಂಟರ್‌ಪ್ರೈಸರ್‌’
ಬ್ಯಾನರ್‌ ಅಡಿಯಲ್ಲಿ “ಬಡ್ಡೀಸ್‌’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದ ಹಲವು ಚಿತ್ರಗಳಿಗೆ ಸಂಭಾಷಣೆಕಾರ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ, ಈ ಹಿಂದೆ “5ಜಿ’ ಚಿತ್ರವನ್ನು ನಿರ್ದೇಶಿಸಿದ್ದ ಗುರುವೇಂದ್ರ ಶೆಟ್ಟಿ ಈ ಚಿತ್ರವನ್ನು
ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ:ರಿಯಲ್‌ ಹೀರೋ ವೀರಪ್ಪ : ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!

ಹೆಸರೇ ಹೇಳುವಂತೆ “ಬಡ್ಡೀಸ್‌’ ಆತ್ಮೀಯ ಸ್ನೇಹಿತರ ಕಥೆಯನ್ನು ಹೊಂದಿದ ಚಿತ್ರವಾಗಿದ್ದು, ಸ್ನೇಹದ ಮಹತ್ವವನ್ನು ಮನರಂಜನಾತ್ಮಕವಾಗಿ ಚಿತ್ರಕಥೆಯಲ್ಲಿ ಹೇಳಲಾಗಿದೆ ಎಂದಿದೆ ಚಿತ್ರತಂಡ. ಸದ್ಯ “ಬಡ್ಡೀಸ್‌’ ಚಿತ್ರದ  ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರೀಕರಣಕ್ಕೆ ಅಣಿಯಾಗಿದೆ. ಚಿತ್ರಕ್ಕೆ ನಿಭಾ ಶೆಟ್ಟಿ ಛಾಯಾಗ್ರಹಣವಿದೆ. ಈ ಮೂಲಕ ಛಾಯಾಗ್ರಾಹಕಿಯೊಬ್ಬರು ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಂತಾಗುತ್ತದೆ. ಜ್ಯೂಡಾ ಸ್ಯಾಂಡಿ ಸಂಗೀತವಿದೆ.

Advertisement

ಉಳಿದಂತೆ ಗೋಪಾಲ್‌ ದೇಶಪಾಂಡೆ, ಅರವಿಂದ್‌ ಬೋಳಾರ್‌ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next