Advertisement

ನಟಿ ಪ್ರಿಯಾಂಕಾ ನ್ಯೂ ಲುಕ್ ಡ್ರೆಸ್ ವೈರಲ್…ಕಾಲೆಳೆದ ಟ್ರೋಲಿಗರು!

01:30 PM Feb 24, 2021 | Team Udayavani |

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ನ್ಯೂ ಲುಕ್ ಟ್ರೋಲಿಗರು ಅಣಕಿಸಲು ಬಳಸಿಕೊಂಡಿದ್ದು, ಪಿಗ್ಗಿಯ ಹೊಸ ಅವತಾರ ಛೇಡಿಸುವ ಮಿಮ್ಸ್ ಗಳ ರಾಶಿ ಟ್ವಿಟರ್ ನಲ್ಲಿ ಹರಿದಾಡುತ್ತಿವೆ.

Advertisement

ಬಿಟೌನ್ ನ ಕೃಷ್ಣ ಸುಂದರಿ ಪ್ರಿಯಾಂಕಾ ಚೆಂಡಿನಾಕಾರದಲ್ಲಿ ಡ್ರಸ್ ಮಾಡಿದ್ದಾರೆ. ಈ ಹೊಸ ಬಗೆಯ ಉಡುಗೆಯ ಚಿತ್ರಗಳನ್ನು ತಮ್ಮ ಇನ್ಸ್ಟಾ, ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಪಿಗ್ಗಿ ನ್ಯೂ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲರೂ ಖುಷಿಯಿಂದ ಲೈಕ್ ಕೂಡ ಒತ್ತಿದ್ದಾರೆ. ಆದರೆ, ಇನ್ನು ಕೆಲವರು ಪ್ರಿಯಾಂಕಾ ಅವರ ಹೊಸ ಲುಕ್ ಗೇಲಿ ಮಾಡಿದ್ದಾರೆ. ವಾಹನಗಳ ಹಾರ್ನ್, ಕ್ರಿಕೆಟ್ ಬಾಲ್, ಕಸದ ಗಂಟು, ಪಟಾಕಿಗಳು ಹೀಗೆ ಹಲವು ಬಗೆಯ ಮಿಮ್ಸ್  ಮೂಲಕ ಕಾಲೆಳೆದಿದ್ದಾರೆ.

ಇದನ್ನೂ ಓದಿ :ಹೊರಬಂತು ‘ಹೀರೋ’ ಮೊದಲ ಹಾಡು

ತಮ್ಮ ಹೊಸ ಲುಕ್ ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದನ್ನು ಪ್ರಿಯಾಂಕಾ ಎಂಜಾಯ್ ಮಾಡಿದ್ದಾರೆ. ಕೆಲವೊಂದಿಷ್ಟು ಮಿಮ್ಸ್ ಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ‘ನೋಡಲು ತುಂಬ ತಮಾಷೆಯಾಗಿದೆ. ನನ್ನ ಈ ದಿನ ಸುಂದರವಾಗಿಸಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ.

Advertisement

ಇನ್ನು ಪ್ರಿಯಾಂಕಾ ಚೋಪ್ರಾ ಅವರು ಡ್ರಸ್ ವಿಷಯವಾಗಿ ಟ್ರೋಲ್ ಆಗುವುದು ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಪಿಗ್ಗಿ ಫ್ಯಾಷನ್ ಅಣಕಿಸುವ ಮಿಮ್ಸ್ ಗಳು ಹರಿದಾಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next