Advertisement

ಟಾಲಿವುಡ್‌ ನಟಿಯ ಕಾರು ಅಡ್ಡಗಟ್ಟಿ ಹೊರಗೆಳೆದು ಲೈಂಗಿಕ ಕಿರುಕುಳ

12:12 PM Sep 20, 2017 | udayavani editorial |

ಕೋಲ್ಕತ : ಮಂಗಳವಾರ ನಡುರಾತ್ರಿ ತನ್ನ ಸಿನೇಮಾ ಶೂಟಿಂಗ್‌ ಮುಗಿಸಿ ಮನೆಗೆ ಮರಳುತ್ತಿದ್ದ ಟಾಲಿವುಡ್‌ ನಟಿ ಕಾಂಚನಾ ಮೊಯಿತ್ರಾ ಅವರ ಕಾರನ್ನು, ಮೂವರು ಕುಡುಕರು ಅಡ್ಡಗಟ್ಟಿ, ಹೊರಗೆಳೆದು ಅವರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. 

Advertisement

ನಟಿ ಕಾಂಚನಾ ನೀಡಿರುವ ದೂರಿನ ಆಧಾರದಲ್ಲಿ  ಕೋಲ್ಕತ ಪೊಲೀಸರು ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿ ಮೂರನೇ ಆರೋಪಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. 

ರಾತ್ರಿ 1 ಗಂಟೆಯ ಹೊತ್ತಿಗೆ ಸಿನೇಮಾ ಶೂಟಿಂಗ್‌ ಮುಗಿಸಿ ಮನೆಗೆ ಮರಳುತ್ತಿದ್ದ ಕಾಂಚನಾ ಅವರ ಕಾರು ಶಿರಿತಿ ಕ್ರಾಸಿಂಗ್‌ನಲ್ಲಿ ರಸ್ತೆಯಲ್ಲಿ  ನಿಂತಿದ್ದ ವ್ಯಕ್ತಿಗೆ ತಾಗಿಕೊಂಡು ಸಾಗಿದಾಗ ಅಲ್ಲೇ ಸ್ವಲ್ಪ ಮುಂದೆ, ಕುಡಿದ ಅಮಲಿನಲ್ಲಿದ್ದ, ಮೂರು ವ್ಯಕ್ತಿಗಳು ಕಾರನ್ನು ತಡೆದು, ಕೀಯನ್ನು ಸೆಳೆದುಕೊಂಡು, ಕಾಂಚನಾ ಅವರನ್ನು ಹೊರಗೆಳೆದು ಅವರಿಗೆ ಲೈಂಗಿಕ ಕಿರುಕುಳ ನೀಡಿದರು. 

ಕಾಂಚನಾ ಅವರು ನಗರದ ನೈಋತ್ಯ ಭಾಗದಲ್ಲಿನ ತಮ್ಮ ಬೆಹಾಲಾ ನಿವಾಸಕ್ಕೆ ತೆರಳುತ್ತಿದ್ದಾಗ ಅವರ ಮೇಲೆ ಈ ದಾಳಿ ನಡೆಯಿತು. 

“ಕಾಂಚನಾ ಅವರ ದೂರನ್ನು ಆಧರಿಸಿ ನಾವು ಮೂವರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ; ಮೂರನೇಯವನನ್ನು ಬೇಗನೆ ಸೆರೆ ಹಿಡಿಯಲಿದ್ದೇವೆ’ ಎಂದು ಬೆಹಾಲಾ ಡಿಸಿ ಮೀರಜ್‌ ಖಾಲಿದ್‌ ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next