Advertisement

ಶ್ರೀಲೀಲಾ! 

06:00 AM Jun 24, 2018 | Team Udayavani |

ಕೆಲವು ನಟಿಯರ ಅದೃಷ್ಟ ತುಂಬಾನೇ ಚೆನ್ನಾಗಿರುತ್ತದೆ. ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಬೇರೆ ಬೇರೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ. ಈ ಮೂಲಕ ಚಿತ್ರರಂಗಕ್ಕೆ ಗ್ರ್ಯಾಂಡ್‌ ಎಂಟ್ರಿಕೊಡುತ್ತಾರೆ. ಈಗ ಶ್ರೀಲೀಲಾ ಎಂಬ ನಟಿ ಕೂಡಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದಾರೆ. ಯಾರು ಈ ಶ್ರೀಲೀಲಾ ಎಂದರೆ ತೋರಿಸಲು ಯಾವ ಸಿನಿಮಾವೂ ಇಲ್ಲ. ಕಿಸ್‌ ಎಂಬ ಸಿನಿಮಾ ಬಗ್ಗೆ ನೀವು ಕೇಳಿದ್ದರೆ ನಿಮಗೆ ಶ್ರೀಲೀಲಾ ನೆನಪಾಗಬಹುದು. ಎ.ಪಿ.ಅರ್ಜುನ್‌ ನಿರ್ದೇಶನದ ಕಿಸ್‌ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟವರು ಶ್ರೀಲೀಲಾ. ಆ ಸಿನಿಮಾ ಇನ್ನಷ್ಟೇ ತೆರೆಕಾಣಬೇಕಿದೆ. ಅಷ್ಟರಲ್ಲೇ ಶ್ರೀಲೀಲಾಗೆ ಮತ್ತೂಂದು ದೊಡ್ಡ ಸಿನೆಮಾದಿಂದ ಅವಕಾಶ ಸಿಕ್ಕಿದೆ. ಅದು ಮುರಳಿ ನಾಯಕರಾಗಿರುವ ಸಿನೆಮಾ. ಮುರಳಿ ನಾಯಕರಾಗಿರುವ ಚೇತನ್‌ ಕುಮಾರ್‌ ನಿರ್ದೇಶನದ ಚಿತ್ರದಲ್ಲಿ  ಶ್ರೀಲೀಲಾಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಈ ಮೂಲಕ ಎರಡನೇ ಸಿನೆಮಾಕ್ಕೆ ಸ್ಟಾರ್‌ ನಟನ ಸಿನಿಮಾದಲ್ಲಿ ನಟಿಸುವಂತಾಗಿದೆ. ಇದರಿಂದ ಸಹಜವಾಗಿಯೇ ಶ್ರೀಲೀಲಾ ಖುಷಿಯಾಗಿದ್ದಾರೆ. 

Advertisement

ಇದರ ಜೊತೆಗೆ ಶ್ರೀಲೀಲಾ ಹೆಸರು ಮತ್ತೂಂದು ಸಿನಿಮಾದಲ್ಲೂ ಕೇಳಿಬರುತ್ತಿದೆ. ಅದು ಧ್ರುವ ಸರ್ಜಾ ನಾಯಕರಾಗಿರುವ ಸಿನೆಮಾ. ಧ್ರುವ ಸರ್ಜಾ ಪೊಗರು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರದಲ್ಲೂ ಶ್ರೀಲೀಲಾಗೆ ಹೆಸರು ಕೇಳಿಬರುತ್ತಿದೆ. ಧ್ರುವ ಜೊತೆ ಫ್ರೆಶ್‌ ಫೇಸ್‌ ಇರಬೇಕೆಂಬ ಕಾರಣಕ್ಕೆ ಶ್ರೀಲೀಲಾ ಅವರನ್ನು ನಾಯಕಿಯನ್ನಾಗಿಸುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದು ಹೋಗಿದೆ. ಒಂದು ವೇಳೆ ಮಾತುಕತೆ ಫ‌ಲಪ್ರದವಾದರೆ ಶ್ರೀಲೀಲಾ ಪೊಗರು ಸಿನೆಮಾದಲ್ಲೂ ನಟಿಸಬಹುದು. ಅಂದಹಾಗೆ, ಶ್ರೀಲೀಲಾ ಒಳ್ಳೆಯ ನೃತ್ಯಗಾರ್ತಿ ಕೂಡಾ. ಭರತನಾಟ್ಯ ಸೇರಿದಂತೆ ವಿವಿಧ ನೃತ್ಯಪ್ರಾಕಾರಗಳಲ್ಲಿ ಪ್ರವೀಣೆ. ಜೊತೆಗೆ ಸ್ವಿಮ್ಮಿಂಗ್‌, ಬಾಕ್ಸಿಂಗ್‌, ಸ್ಕೇಟಿಂಗ್‌ನಲ್ಲೂ ಶ್ರೀಲೀಲಾ ಎತ್ತಿದ ಕೈ. 

Advertisement

Udayavani is now on Telegram. Click here to join our channel and stay updated with the latest news.

Next