Advertisement

ನಟಿ ಹರ್ಷಿಕಾ ಪೂಣಚ್ಚಗೆ ಕಿರುಕುಳ: ಓರ್ವನ ಬಂಧನ

11:06 PM May 03, 2019 | Team Udayavani |

ಮಡಿಕೇರಿ: ಸ್ಯಾಂಡಲ್‌ವುಡ್‌ ನಟಿ, ಕೊಡಗಿನ ಹರ್ಷಿಕಾ ಪೂಣಚ್ಚ ಅವರಿಗೆ ಇಬ್ಬರು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನಟ ಭುವನ್‌ ಪೊನ್ನಣ್ಣ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Advertisement

ಈ ಸಂಬಂಧ ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಎಂಬಾತನನ್ನು ಪೊಲೀ ಸರು ಬಂಧಿ ಸಿದ್ದು, ಬಿಪಿನ್‌ ದೇವಯ್ಯ ಎಂಬಾತನಿಗೆ ಬಲೆ ಬೀಸಿದ್ದಾರೆ. ಹರ್ಷಿಕಾ ಪೂಣಚ್ಚ ಅವರು ಮೇ 2ರಂದು ಮಡಿಕೇರಿ ಹೊರವಲಯದ ಕಡಗದಾಳು ಸಮೀಪದ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದ್ದ, ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಹಾಗೂ ಬಿಪಿನ್‌ ದೇವಯ್ಯ ಅವರು ರಾತ್ರಿ 11 ಗಂಟೆ ಸುಮಾರಿಗೆ ನಟಿ ಹರ್ಷಿಕಾ ಪೂಣಚ್ಚ ಅವರೊಂದಿಗೆ ವಿನಾಕಾರಣ ಜಗಳವಾಡಿ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ಈ ಸಂದರ್ಭ ನಟ ಭುವನ್‌ ಕೂಡ ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next