Advertisement

Deepika Das: ನಟಿ ದೀಪಿಕಾ ದಾಸ್‌ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು

12:10 PM Nov 28, 2024 | Team Udayavani |

ಬೆಂಗಳೂರು: ವ್ಯಕ್ತಿಯೊಬ್ಬ ಕಿರುತೆರೆ ನಟಿ ದೀಪಿಕಾ ದಾಸ್‌ (Deepika Das) ಅವರ ಬಗ್ಗೆ ಅಪಪ್ರಚಾರ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ನಟಿಯ ತಾಯಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ನಟಿ ದೀಪಿಕಾ ದಾಸ್‌ ಇತ್ತೀಚೆಗೆ ದೀಪಕ್ ಕುಮಾರ್ ಎಂಬುವರೊಟ್ಟಿಗೆ ವಿವಾಹವಾಗಿದ್ದಾರೆ. ಸದ್ಯ ಪತಿ – ಪತ್ನಿ ಇಬ್ಬರು ಪ್ರವಾಸದಲ್ಲಿದ್ದಾರೆ.

ಯಶವಂತ್ ಎಂಬಾತ ದೀಪಿಕಾ ದಾಸ್‌ ಮತ್ತು ಅವರ ಪತಿ ವಿರುದ್ಧ ಅಪಪ್ರಚಾರ ಮಾಡಿದ್ದಾನೆ. ನಟಿಯ ತಾಯಿಗೆ ಕರೆ ಮಾಡಿದ್ದ ಯಶವಂತ್‌ ದೀಪಿಕಾ ಅವರನ್ನು ಆತನೊಂದಿಗೆ ಯಾಕೆ ಮದುವೆ ಮಾಡಿಸಿದ್ದೀರಿ. ಆತ ಒಬ್ಬ ಮೋಸಗಾರ. ಆತ​ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಬಡಾವಣೆ ಮಾಡಿಕೊಂಡಿದ್ದಾನೆ. ಹಲವು ಪ್ರಕರಣ ಆತನ ಮೇಲಿದ್ದು ಜೈಲಿಗೆ ಸಹ ಹೋಗಿ ಬಂದಿದ್ದಾನೆ ಎಂದು ಫೋನಿನಲ್ಲಿ ಹೇಳಿದ್ದಾನೆ ಎಂದು ದೂರಿನಲ್ಲಿ ನಟಿಯ ತಾಯಿ ಪದ್ಮಲತಾ ದೂರಿನಲ್ಲಿ ತಿಳಿಸಿದ್ದಾರೆ.

ಇದಲ್ಲದೆ ಯಶವಂತ್‌ ದೀಪಿಕಾ ದಾಸ್‌ ಅವರಿಗೆ ಕರೆ ಮಾಡಿ “ನನಗೆ ಹಣ ಕೊಡಿ ಇಲ್ಲದಿದ್ದರೆ ನಿಮ್ಮ ಹೆಸರಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ದೀಪಕ್‌ ಅವರ ಕೆಲ ಗೆಳೆಯರಿಗೂ ಈತ ಕರೆ ಮಾಡಿದ್ದಾನೆ. ಕಳೆದ ಏಳು ತಿಂಗಳಿನಿಂದಲೂ ದೀಪಿಕಾ, ದೀಪಕ್‌ ಕುಮಾರ್‌ ಅವರಿಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಈ ರೀತಿ ಕರೆ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಪದ್ಮಲತಾ ಹೇಳಿದ್ದಾರೆ.

Advertisement

ಸದ್ಯ ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ಸೆರೆಗೆ ತನಿಖೆ ಆರಂಭಿಸಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ʼನಾಗಿಣಿʼಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ, ಬಿಗ್‌ ಬಾಸ್‌ ಕನ್ನಡದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next