Advertisement

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕೊಟೂರು

02:54 PM Mar 28, 2021 | Team Udayavani |

ಬೆಂಗಳೂರು: ರಂಗಭೂಮಿ ಕಲಾವಿದೆ ಚೈತ್ರಾ ಕೊಟೂರು ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸ್ನೇಹಿತ ಉದ್ಯಮಿ ನಾಗಾರ್ಜುನ ಅವರ ಜತೆ ಹಸೆಮಣೆ ಏರಿದ್ದಾರೆ.

Advertisement

ಭಾನುವಾರ ಮುಂಜಾನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಚೈತ್ರಾ ಹಾಗೂ ನಾಗಾರ್ಜುನ ಸತಿಪತಿಗಳಾಗಿದ್ದಾರೆ.

ಚೈತ್ರಾ ಕೊಟೂರು ಹಾಗೂ ನಾಗಾರ್ಜುನ ಒಂದು ವರ್ಷದ ಹಿಂದೆ ಪರಿಚಯವಾಗಿದ್ದರು. ಇವರಿಬ್ಬರ ನಡುವೆ ಮೊಳಕೆಯೊಡೆದ ಸ್ನೇಹ, ನಂತರ ಪ್ರೀತಿಯಾಗಿ ಪರಿವರ್ತನೆಗೊಂಡಿತು. ಇದೀಗ ಈ ಜೋಡಿ ಗುರು-ಹಿರಿಯರ ಆಶೀರ್ವಾದದಿಂದ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಇನ್ನು ಚೈತ್ರಾ ಕನ್ನಡದ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದರು. ಬರಹಗಾರ್ತಿ ಹಾಗೂ ಕಲಾವಿದೆಯಾಗಿಯೂ ಹೆಸರು ಮಾಡಿದ್ದಾರೆ. ಇವರು ಹರಿಪ್ರಿಯಾ ಅವರ ‘ಸೂಜಿದಾರ’ ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರ ಮಾಡಿದ್ದರು. ಇತ್ತೀಚೆಗೆ ಆಲ್ಬಂ ಹಾಡನ್ನು ಬರೆದು, ಸಂಗೀತ ನಿರ್ದೇಶನ ಮಾಡಿ ಅದರಲ್ಲಿ ನಟಿಸುವ ಮೂಲಕ ಕೂಡ ಚೈತ್ರಾ ಕೊಟೂರು  ಸುದ್ದಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next