Advertisement

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

01:22 PM May 17, 2024 | Team Udayavani |

ಬೆಂಗಳೂರು: ಸೌತ್‌ ಸಿನಿಮಾ ರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸದ್ಯ ಚಿತ್ರರಂಗದಲ್ಲಿ  ಅಷ್ಟಾಗಿ ಸಕ್ರಿಯರಾಗಿಲ್ಲ. ಒಂದು ಕಾಲದಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕೊಟ್ಟ ಕರಾವಳಿ ಚೆಲುವೆ ಮಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದು, ಆ ಮೂಲಕ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್‌ ಮಾಡುವ ತಯಾರಿಯಲ್ಲಿದ್ದಾರೆ.

Advertisement

ಚಿತ್ರರಂಗದಲ್ಲಿ ಅನುಷ್ಕಾ ಎಷ್ಟರಮಟ್ಟಿಗೆ ಸುದ್ದಿಯಾಗಿದ್ದರೋ, ಅವರ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ʼಬಾಹುಬಲಿʼ ಬೆಡಗಿಗೆ ವಯಸ್ಸು 42 ದಾಟಿದರೂ ಇನ್ನು ಮದುವೆ ಆಗದೆ ಉಳಿದಿದ್ದಾರೆ.

ಡಾರ್ಲಿಂಗ್‌ ಪ್ರಭಾಸ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದ ವಿಚಾರ ಸಿನಿರಂಗದಲ್ಲಿ ಸದ್ದು ಮಾಡಿತ್ತು. ಆದರೆ ಇಬ್ಬರು ಸ್ನೇಹಿತರೆಂದೇ ಹೇಳುತ್ತಿದ್ದರು. ಇಬ್ಬರ ನಡುವಿನ ಆತ್ಮೀಯತೆಯ ವಿಚಾರ ಮದುವೆಯವರೆಗೂ ಹಬ್ಬಿತ್ತು.

ಇದೀಗ ಟಾಲಿವುಡ್‌ ನಲ್ಲಿ ಅನುಷ್ಕಾ ಶೆಟ್ಟಿಯ ಮದುವೆ ಸುದ್ದಿ ಮತ್ತೆ ಹರಿದಾಡಿದೆ. ಶೀಘ್ರದಲ್ಲಿ ಅನುಷ್ಕಾ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಹಬ್ಬಿವೆ.

ಕನ್ನಡದ ಖ್ಯಾತ ನಿರ್ಮಾಪಕರನ್ನು ಅನುಷ್ಕಾ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಎರಡೂ ಕುಟುಂಬದವರು ಸಂಬಂಧವನ್ನು ಒಪ್ಪಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಗಳು ಟಾಲಿವುಡ್‌ ನಲ್ಲಿ ಹರಿದಾಡಿದೆ.

Advertisement

ನಿರ್ಮಾಪಕನಿಗೂ 42 ವರ್ಷಗಳಾಗಿವೆ ಎಂದು ವರದಿ ತಿಳಿಸಿದೆ. ಆದರೆ ಆ ನಿರ್ಮಾಪಕನ ಹೆಸರು ಇದುವರೆಗೆ ಬಹಿರಂಗವಾಗಿಲ್ಲ.

ಸದ್ಯ ಈ ಬಗ್ಗೆ ಅನುಷ್ಕಾ ಶೆಟ್ಟಿ ಕಡೆಯಿಂದಾಗಲಿ ಅಥವಾ ಅವರ ತಂಡದಿದಾಗಲಿ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next