Advertisement

ನಟಿ ಐಶ್ವರ್ಯ ರೈ ತಂದೆ  ಆಸ್ಪತ್ರೆಗೆ ದಾಖಲು

03:45 AM Jan 29, 2017 | Team Udayavani |

ಮುಂಬೈ: ಬಾಲಿವುಡ್‌ ನಟಿ ಐಶ್ವರ್ಯ ರೈ ತಂದೆ ಕೃಷ್ಣರಾಜ ರೈ ಅವರನ್ನು ಅನಾರೋಗ್ಯ ನಿಮಿತ್ತ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 2 ವಾರ ಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೆಬ್‌ಸೈಟ್‌ ಒಂದು ವರದಿ ಮಾಡಿದೆ. ಗಮಧಿನಾರ್ಹ ಅಂಶವೆಂದರೆ ಐಶ್ವರ್ಯ ರೈ ಏಕಾಂಗಿಯಾಗಿ ತಂದೆಯ ಯೋಗಕ್ಷೇಮ ನೋಡಿಧಿಕೊಳ್ಳುಧಿತ್ತಿದ್ದಾರೆ. ಪತಿ ಅಭಿಷೇಕ್‌ ಬಚ್ಚನ್‌ ಶೂಟಿಂಗ್‌ಗೋಸ್ಕರ ನ್ಯೂಯಾರ್ಕ್‌ನಲ್ಲಿದ್ದಾರೆ. ಆದರೆ ಮತ್ತೂಂದು ವರದಿಯ ಪ್ರಕಾರ ಅಭಿಷೇಕ್‌ ಬಚ್ಚನ್‌ ಅವರು ಚಿತ್ರೀಕರಣ ಮುಕ್ತಾಯಗೊಳಿಸಿ ಸ್ವದೇಶಕ್ಕೆ ವಾಪಸಾಗಿ, ಆಸ್ಪತ್ರೆಗೆ ಕೂಡ ಭೇಟಿ ನೀಡಿದ್ದಾರೆ. ಜತೆಗೆ ಪತ್ನಿಗೆ ನೆರವಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಪುತ್ರಿ ಆರಾಧ್ಯಳ ಶಾಲೆಯಲ್ಲಿ ನಡೆದಿದ್ದ ಕ್ರೀಡಾಕೂಟದ ಸಂದರ್ಭದಲ್ಲಿಯೂ ಕೂಡ ಬಾಲಿವುಡ್‌ ನಟಿ ಇತರ ಮಕ್ಕಳು ಹಾಗೂ ಪುತ್ರಿಯ ಜತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next