Advertisement

“ಆತ ಖಾಸಗಿ ಅಂಗದ ಫೋಟೋ ಕಳುಹಿಸಿದ್ದ..”ಆನ್ಲೈನ್‌ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

02:33 PM Apr 21, 2023 | Team Udayavani |

ಚೆನ್ನೈ: ಬಹುಭಾಷಾ ನಟಿ ಐಶ್ವರ್ಯ ಭಾಸ್ಕರನ್ ಅವರಿಗೆ ಕೆಲ ವ್ಯಕ್ತಿಗಳು ಆನ್ಲೈನ್‌ ನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಬಗ್ಗೆ ಸ್ವತಃ ನಟಿಯೇ ಈ ಬಗ್ಗೆ ಮಾತನಾಡಿದ್ದಾರೆ.

Advertisement

ತಮ್ಮ ಯೂಟ್ಯೂಬ್‌ ಚಾನೆಲ್‌ ʼಮಲ್ಟಿ ಮಮ್ಮಿʼ ನಲ್ಲಿ ಈ ಬಗ್ಗೆ ಅವರು ಮಾತನಾಡಿ ಮೌನ ಮುರಿದಿದ್ದಾರೆ. ಕೆಲ ಸಮಯದ ಹಿಂದೆ ನಟಿ ಐಶ್ವರ್ಯ ಭಾಸ್ಕರನ್ ಅವರು ಸೋಪ್‌ ( ಸಾಬೂನು) ಉದ್ಯಮವನ್ನು ಆರಂಭಿಸಿದ್ದಾರೆ. ಈ ಬ್ಯುಸಿನೆಸ್‌ ಇನ್ನಷ್ಟು ಜನರಿಗೆ ತಲುಪುದಕ್ಕಾಗಿ ನಟಿ ತಮ್ಮ ಫೋನ್‌ ನಂಬರ್‌ ನ್ನು ಸಾರ್ವಜನಿಕವಾಗಿ ರಿವೀಲ್‌ ಮಾಡಿದ್ದಾರೆ.

ಈ ವಿಚಾರವೇ ನಟಿಗೆ ಮುಳ್ಳುವಾಗಿ ಪರಿಣಮಿಸಿದೆ. ತಮ್ಮ ಸೋಪ್‌ ಪ್ರೂಡಕ್ಟ್‌ ಸರಿಯಾಗಿ ಆರ್ಡರ್‌ ಆಗಲಿ, ಆ ಕಾರಣಕ್ಕಾಗಿ ನಂಬರ್‌ ಹಾಕಿದ್ದ ನಟಿಗೆ, ಕೆಲ ದಿನಗಳ ಬಳಿಕ ವಾಟ್ಸಾಪ್‌ ನಲ್ಲಿ ಅಸಭ್ಯ ರೀತಿಯ ಮೆಸೇಜ್‌, ಫೋಟೋ, ವಿಡಿಯೋಗಳು ಬರತೊಡಗಿದೆ.

ಇದನ್ನೂ ಓದಿ: ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಅನೇಕ ಮಂದಿ ಅಸಭ್ಯ ಮೆಸೇಜ್‌, ವಿಡಿಯೋಗಳನ್ನು ಕಳುಹಿಸಿದ್ದಾರೆ. ಒಬ್ಬ ವ್ಯಕ್ತಿಯಂತೂ ತನ್ನ ಖಾಸಗಿ ಅಂಗದ ಫೋಟೋವನ್ನು ಕಳುಹಿಸಿದ್ದಾನೆ.ಇದನ್ನು ನಾನೀಗ ಸೈಬರ್‌ ಪೊಲೀಸರಿಗೆ ದೂರಾಗಿ ನೀಡುವುದಿಲ್ಲ ಇದೇ ರೀತಿ ಇನ್ಮುಂದೆಯೂ ಮುಂದುವರೆದರೆ ಖಂಡಿತ ನಾನು ಇದನ್ನು ಪೊಲೀಸರಿಗೆ ಹೇಳುತ್ತೇನೆ ಎಂದಿದ್ದಾರೆ. ಈ ವಿಚಾರವನ್ನು ನನ್ನ ಮಗಳ ಸಲಹೆ ಮೇರೆಗೆ ನಿಮ್ಮೊಂದಿಗೆ ಹಂಚಿಕೊಂಡೇ ಎಂದಿದ್ದಾರೆ.

Advertisement

ನಾನು ಹಣಕ್ಕಾಗಿ ಸೋಪ್‌ ಮಾರುತ್ತೇನೆ ವಿನಃ ನನ್ನನು ನಾನು ಮಾರಿಕೊಳ್ಳುವುದಿಲ್ಲ ಎಂದು ನಟಿ ಹೇಳಿದ್ದಾರೆ.

ನಟಿ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯಾ ಭಾಸ್ಕರನ್ ʼಎಜಮಾನ್ʼ , ʼಆರುʼ ʼಪಂಚತಂತ್ರಂʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next