Advertisement

ಯಾರಾದರೂ ನನ್ನ ಹೆಸರು ಮರೆತಿದ್ದೀರಾ.. ?  

07:16 PM Feb 17, 2021 | Team Udayavani |

ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಒಮ್ಮೆ ಈ ಸುಂದರಿಯ ಹೆಸರು ಕೇಳಿದ್ಮೇಲೆ ಮುಗೀತು, ಎಲ್ಲಿಯಾದರೂ ಮರೆಯುವುದುಂಟಾ ? ಅದಾಗ್ಯೂ ಒಂದು ವೇಳೆ ಈ ಮೋಹಕ ತಾರೆಯ ಹೆಸರು ನೀವು ಮರೆತಿದ್ದರೆ, ಡೋಂಟ್ ವರಿ. ತಮ್ಮ ಹೆಸರು ನೆನಪಿಸುವ ಮಾರ್ಗ ಹೇಳಿದ್ದಾರೆ ಈ ಬಿಟೌನ್ ಬೆಡಗಿ.

Advertisement

ಹೌದು, ಸನ್ನಿ ಲಿಯೋನ್ ಕೇವಲ ನಟನೆ ಮಾತ್ರವಲ್ಲದೆ ಸಮಾಜ ಪರ ಕಾರ್ಯಗಳಿಂದಲೂ ಹೆಸರು ಮಾಡಿದವರು. ಕಷ್ಟ ಅಂತಾ ಬಂದವರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡದವರು. ದೇಶದಲ್ಲಿ ಎಲ್ಲಿಯಾದರೂ ಪ್ರಕೃತಿ ವಿಕೋಪದಂತಹ ದುರ್ಘಟನೆಗಳಿಗೆ ಸನ್ನಿ ಲಿಯೋನ್ ಹೃದಯ ಮಿಡಿಯುತ್ತದೆ. ತಮಿಳುನಾಡು, ಕೇರಳ ಪ್ರವಾಹದ ವೇಳೆ ಕೋಟ್ಯಾಂತರ ಹಣ ದಾನ ಮಾಡಿದ್ದರು ಈ ನಟಿ. ಅಷ್ಟೇ ಅಲ್ಲ ಮಹಾರಾಷ್ಟ್ರದ ಅನಾಥ ಹೆಣ್ಣು ಮಗುವೊಂದನ್ನು ದತ್ತು ಪಡೆದು ಸ್ವಂತ ಮಗಳಂತೆ ಸಾಕುತ್ತಿದ್ದಾರೆ.

ಸದ್ಯ ತಮ್ಮ ಇನ್ ಸ್ಟಾಗ್ರಾಂನಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಈ ನ್ಯೂ ಲುಕ್ ನಲ್ಲಿ ನೀಲಿ ಬಣ್ಣದ ಸ್ವಿಮ್ ಸೂಟ್ ತೊಟ್ಟು , ಅರ್ಧಮುಖ ಕಾಣಿಸುವಂತೆ ತಲೆ ಮೇಲೆ ಕ್ಯಾಪ್  ಧರಿಸಿ ಸ್ವಿಮ್ಮಿಂಗ್ ಫೂಲ್ ವೊಂದರಲ್ಲಿ ಮಲಗಿದ್ದಾರೆ. ಈಕೆ ಧರಿಸಿರುವ ಕ್ಯಾಪ್ ಮೇಲೆ ಸನ್ನಿ ಲಿಯೋನ್ ಹೆಸರು ಬರೆಯಲಾಗಿದೆ.

Advertisement

ತಮ್ಮ ಈ ಸುಂದರ ಫೋಟೊ ಶೇರ್ ಮಾಡಿರುವ ಸನ್ನಿ ಲಿಯೋನ್, ‘ಒಂದು ವೇಳೆ ಯಾರಾದರೂ ನನ್ನ ಹೆಸರು ಮರೆತಿದ್ದರೆ, ಅದು ನನ್ನ ಕ್ಯಾಪ್ ಮೇಲಿದೆ ನೋಡಿ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next